ಈ ಕಾರಣಕ್ಕೆ 17 ವರ್ಷದ ಹುಡುಗನನ್ನು ಕೊಂದ 16 ವರ್ಷದ ಹುಡುಗ

ಮಂಗಳವಾರ, 1 ಡಿಸೆಂಬರ್ 2020 (09:04 IST)
ಇಂದೋರ್ : ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಿದ ಒಂದು ಫೋಟೊ ವಿಚಾರಕ್ಕೆ 16 ವರ್ಷದ ಹುಡುಗ ತನ್ನ ಸ್ನೇಹಿತರ ಜೊತೆ ಸೇರಿ 17 ವರ್ಷದ ಹುಡುಗನನ್ನು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ ನಡೆದಿದೆ.

ಕೃಷ್ಣ (17) ಕೊಲೆಯಾದ ಹುಡುಗ, ಆರೋಪಿ ಹುಡುಗ ಕೃಷ್ಣನ ಸಹೋದರಿಯ ಜೊತೆ ತೆಗೆದ ಫೋಟೊವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಸಾಮಾನ್ಯವಾದ ಫೋಟೊವಾಗಿದ್ದರು ಕೃಷ್ಣ ಈ ಬಗ್ಗೆ ಆರೋಪಿಯೊಂದಿಗೆ ಜಗಳವಾಡಿದ್ದಾನೆ.

ಇದರಿಂದ ಕೋಪಗೊಂಡ ಆರೋಪಿ ಹುಡುಗ ತನ್ನ ಮೂವರು ಸ್ನೇಹಿತರೊಂದಿಗೆ ಕೃಷ್ಣನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ರಕ್ತದ ಪಡಲಿನಲ್ಲಿ ಬಿದ್ದ ಕೃಷ್ಣನನ್ನು ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣ ಸಾವನಪ್ಪಿದ್ದಾನೆ.

ಈ ಬಗ್ಗೆ ಕೃಷ್ಣನ ತಂದೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ