ಟ್ರಿಪಲ್ ತಲಾಖ್ ನೀಡಿದ ಒಂದು ವರ್ಷದ ಬಳಿಕ ಪತ್ನಿಯನ್ನು ಕೊಂದ ಪತಿ

ಶುಕ್ರವಾರ, 11 ಡಿಸೆಂಬರ್ 2020 (10:28 IST)
ಮೀರತ್ : ಟ್ರಿಪಲ್ ತಲಾಖ್ ನೀಡಿದ ಒಂದು ವರ್ಷದ ಬಳಿಕ ಪತಿಯೊಬ್ಬ ತನ್ನ ಪತ್ನಿ ಹಾಗೂ ಆಕೆಯ ತಾಯಿಯನ್ನು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ.

ಒಂದು ವರ್ಷದ ಹಿಂದೆ ಪತಿ ಟ್ರಿಪಲ್ ತಲಾಖ್ ನೀಡಿದ್ದ ಹಿನ್ನಲೆಯಲ್ಲಿ ತವರು ಮನೆಗೆ ಬಂದ ಮೃತ ಮಹಿಳೆ ತನ್ನ ಪತಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಈ ಪ್ರಕರಣ ವಾಪಾಸು ಪಡೆಯುವಂತೆ ಆರೋಪಿ ಪತಿ ಒತ್ತಾಯಿಸುತ್ತಿದ್ದ. ಇದಕ್ಕೆ ಮಹಿಳೆ ಒಪ್ಪದ ಕಾರಣ ಪತಿ ಗುಂಡು ಹಾರಿಸಿ ಪತ್ನಿ ಮತ್ತು ಆಕೆಯ ತಾಯಿಯನ್ನು ಕೊಲೆ ಮಾಡಿದ್ದಾನೆ.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ