ಪೊಲೀಸ್ ಅಧಿಕಾರಿಯ ವೇಷ ಧರಿಸಿ 40ಕ್ಕೂ ಹೆಚ್ಚು ಮಹಿಳೆಯರ ಮಾನಭಂಗ ಮಾಡಿದ ಲಾರಿ ಮಾಲೀಕ

ಶುಕ್ರವಾರ, 25 ಸೆಪ್ಟಂಬರ್ 2020 (09:38 IST)
ಚೆನ್ನೈ : ಲಾರಿ ಮಾಲೀಕನೊಬ್ಬ ಪೊಲೀಸ್ ಅಧಿಕಾರಿಯ ವೇಷ ಧರಿಸಿ 40ಕ್ಕೂ ಹೆಚ್ಚು ಮಹಿಳೆಯರನ್ನು ಹೆದರಿಸಿ ಮಾನಭಂಗ ಮಾಡಿದ ಘಟನೆ  ನಡೆದಿರುವುದಾಗಿ ತಿಳಿದುಬಂದಿದೆ.

ಯುವತಿಯೊಬ್ಬಳು ಪೊಲೀಸ್ ಅಧಿಕಾರಿಯೊಬ್ಬರು ಬಾಯ್ ಫ್ರೆಂಡದ ಜೊತೆ ಇದ್ದಾಗ ತನ್ನನ್ನು ಹೆದರಿಸಿ ಹಣ ದೋಚಿದಲ್ಲದೇ ನನ್ನ ಬೊಬೈಲ್ ನ್ನು ಕಸಿದುಕೊಂಡಿದ್ದಾರೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ  ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಆ ವೇಳೆ ಆರೋಪಿಯ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಪೂಜಾಲ್ ಮತ್ತು ರೆಡ್ ಹಿಲ್ಸ್ ಭಾಗದ ಪ್ರೇಮಿಗಳನ್ನು ಟಾರ್ಗೆಟ್ ಮಾಡಿ ಯುವತಿಯರ ಖಾಸಗಿ ಫೋಟೊಗಳನ್ನು ಇಟ್ಟುಕೊಂಡು ಅವರ ಮೇಲೆ ದೌರ್ಜನ್ಯ ಎಸಗುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ