ಐಪಿಎಲ್ 13: ಚೆನ್ನೈಗೆ ಶಾಕ್ ಕೊಟ್ಟ ರಾಜಸ್ಥಾನ್ ರಾಜರು

ಬುಧವಾರ, 23 ಸೆಪ್ಟಂಬರ್ 2020 (09:09 IST)
ದುಬೈ: ಐಪಿಎಲ್ 13 ರಲ್ಲಿ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 16 ರನ್ ಗಳ ಗೆಲುವು ಕಂಡಿದೆ.

 
ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ಸ್ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿತು. ನಾಯಕ ಸ್ಮಿತ್ 69 ರನ್ ಗಳಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಸಂಜು ಸ್ಯಾಮ್ಸನ್ ಹೊಡೆಬಡಿಯ ಆಟವಾಡಿದ್ದು, 32 ಎಸೆತಗಳಿಂದ 74 ರನ್ ಚಚ್ಚಿ ಭಾರೀ ಮೊತ್ತ ಗಳಿಸಲು ನೆರವಾದರು. ಸಂಜು ಸ್ಪೋಟಕ ಬ್ಯಾಟಿಂಗ್ ಗೆ ಚಾಣಕ್ಷ್ಯ ಚೆನ್ನೈ ಬೌಲಿಂಗ್ ಸಂಪೂರ್ಣ ಹಳಿ ತಪ್ಪಿತು.

ಬಳಿಕ ಬ್ಯಾಟಿಂಗ್ ಗಿಳಿದ ಚೆನ್ನೈ ಕೂಡಾ ಸುಲಭದಲ್ಲಿ ಸೋಲೊಪ್ಪಿಕೊಳ್ಳಲಿಲ್ಲ. ಶೇನ್ ವ್ಯಾಟ್ಸನ್ 33, ಫಾ ಡು ಪ್ಲೆಸಿಸ್ 72 ರನ್ ಗಳಿಸಿದರೆ ಅಂತಿಮ ಹಂತದಲ್ಲಿ ಧೋನಿ ನಾಟೌಟ್ ಆಗಿ 29 ರನ್ ಗಳಿಸಿ ಅಪಾಯದ ಸೂಚನೆ ನೀಡಿದರು. ಆದರೆ ಅವರಿಂದ ತಂಡಕ್ಕೆ ಇನ್ನೂ ಅಗತ್ಯವಿದ್ದ 16 ರನ್ ಗಳಿಸಲು ಸಾಧ್ಯವಾಗದೇ ಹೋಯಿತು. ಅಂತಿಮವಾಗಿ ಚೆನ್ನೈ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಲಷ್ಟೇ ಶಕ್ತವಾಯಿತು. ರಾಯಲ್ಸ್ ಪರ ರಾಹುಲ್ ತೆವಾತಿಯ 3 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ