ಯುವತಿ ಮನೆಯಲ್ಲಿ ಒಬ್ಬಳೆ ಇರುವುದರ ಲಾಭ ಪಡೆದುಕೊಂಡ ಆರೋಪಿ, ಹುಡುಗಿಯನ್ನು ಬೆಡ್ ರೂಮ್ಗೆ ಕೊಂಡೊಯ್ದ ಬಾಗಿಲನ್ನು ಮುಚ್ಚಿದ. ವಿರೋಧ ವ್ಯಕ್ತ ಪಡಿಸಿದ ಯುವತಿ ಆತನನ್ನು ಮನೆಯಿಂದ ಆಚೆ ಹೋಗುವಂತೆ ಹೇಳಿದ್ದಾಳೆ. ಆದರೆ ತನಗೆ ಸಹಕರಿಸುವಂತೆ ಸತಾಯಿಸಿದ ಆತ ನಾನು ನಿನ್ನನ್ನು ಮದುವೆಯಾಗುವುದಾಗಿ ವಾಗ್ದಾನ ಮಾಡಿದ. ಆಕೆ ರಕ್ಷಣೆಗಾಗಿ ಕೂಗಿಕೊಳ್ಳಲು ಅವಕಾಶ ನೀಡದೆ ಆಕೆಯ ಮೇಲಾತ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ 3, 30 ರ ಸಮಯದಲ್ಲಿ ಆತ ಆಕೆಯ ಮನೆಗೆ ಹೋಗಿದ್ದ . ಆ ಸಮಯದಲ್ಲಿ ಆಕೆಯ ತಂದೆ- ತಾಯಿಗಳು ಮತ್ತು ಹಿರಿಯ ಸಹೋದರಿ ಕೆಲಸಕ್ಕೆ ಹೋಗಿದ್ದರು ಎಂದು ತಿಳಿದು ಬಂದಿದೆ. ಆ ದಿನ ಸಂಜೆ ಮನೆಗೆ ಮರಳಿದ ತಂದೆತಾಯಿಗಳಿಗೆ ಬಾಲಕಿ ನಡೆದ ಕುಕೃತ್ಯದ ವಿವರಣೆ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.