ಅನೈತಿಕ ಸಂಬಂಧವಿದೆ ಎಂದಿದ್ದಕ್ಕೆ ಮನನೊಂದು ಮರ್ಮಾಂಗವನ್ನೇ ಕತ್ತರಿಸಿಕೊಂಡ ಸಾಧು

ಶನಿವಾರ, 20 ಅಕ್ಟೋಬರ್ 2018 (07:27 IST)
ಲಕ್ನೋ : ಅನೈತಿಕ ಸಂಬಂಧವಿದೆ ಎಂಬ ಆರೋಪವನ್ನು ಸಹಿಸದೆ 45 ವರ್ಷದ ಸಾಧು ಒಬ್ಬರು ಬ್ಲೇಡ್‍ನಿಂದ ತಮ್ಮ ಮರ್ಮಾಂಗವನ್ನು ಕತ್ತರಿಸಿಕೊಂಡಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಬಾಂದಾ ಜಿಲ್ಲೆಯ ಕಾಮಸಿನ್ ನಗರದಲ್ಲಿ ನಡೆದಿದೆ.


ಮದನಿ ಬಾಬಾ ಎಂಬುವವರು ಕಳೆದ ಹಲವು ವರ್ಷಗಳಿಂದ ಕಾಮಸಿನ್ ನಗರದ ಸರ್ಕಾರಿ ನಿವೇಶನದಲ್ಲಿ ಗುಡಿಸಲು ಹಾಕಿಕೊಂಡು ಹೇಗೋ  ಜೀವನ ನಡೆಸುತ್ತಿದ್ದರು. ಆದರೆ ಕೆಲವು ಮಹಿಳೆಯರು ಸಾಧುವಿಗೆ ಅನೈತಿಕ ಸಂಬಂಧವಿದೆ ಎಂದು ಹೇಳಿದ್ದಾರೆ. ಈ ವಿಚಾರ ಸಾಧು ಕಿವಿಗೆ ಬೀಳುತ್ತಲೇ ಮನನೊಂದ ಸಾಧು ರಾತ್ರಿ ಬ್ಲೇಡ್ ನಿಂದ ಮರ್ಮಾಂಗವನ್ನು ಕತ್ತರಿಸಿಕೊಂಡಿದ್ದಾರೆ.


ಮದನಿ ಬಾಬಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಮರ್ಮಾಂಗ ದೇಹದಿಂದ ಶೇ.80 ರಷ್ಟು ಬೇರೆಯಾಗಿದ್ದು, ಸಾಧು ಸ್ಥಿತಿ ಗಂಭೀರವಾಗಿದೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಧು ಮದನಿ ಬಾಬಾರಿಗೆ ಮಾನಸಿಕವಾಗಿ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ