ಹೆತ್ತ ಮಗುವನ್ನೇ ಕೊಂದು, ಹೈಡ್ರಾಮಾ ಮಾಡಿದ ತಾಯಿ!

ಮಂಗಳವಾರ, 2 ಆಗಸ್ಟ್ 2022 (11:17 IST)
ಹೈದರಾಬಾದ್ : ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಒಂದು ವರ್ಷದ ತನ್ನ ಪುಟ್ಟ ಮಗಳನ್ನು ಮಹಿಳೆಯೊಬ್ಬಳು ಸಂಪ್ಗೆ ಎಸೆದು ಹತ್ಯೆಗೈದು, ನಂತರ ಮಗುವಿನ ಸಾವಿಗೆ ಸರಗಳ್ಳರು ಕಾರಣ ಎಂದು ಕಥೆ ಕಟ್ಟಿದ್ದಾಳೆ.

ಸರಗಳ್ಳರು ಮನೆಯ ಬಳಿ ಮಗುವಿನ ಹತ್ತಿರ ಸರ ಕದಿಯಲು ಯತ್ನಿಸಿದಾಗ, ಮಗು ಸಂಪ್ಗೆ ಬಿದ್ದು ಸಾವನ್ನಪ್ಪಿದೆ ಎಂದು ಮಹಿಳೆ ಆರಂಭದಲ್ಲಿ ಹೇಳಿದ್ದಳು. ಆದರೆ ತನಿಖೆ ನಡೆಸಿದ ಪೊಲೀಸರು ಸರಗಳ್ಳತನ ಮಗುವಿನ ಸಾವಿಗೆ ಕಾರಣವಲ್ಲ. ಮಗುವನ್ನು ತಾನೇ ಕೊಂದು ಹಾಕಿ ನಂತರ ಮಹಿಳೆ ನಾಟಕವಾಡಿದ್ದಾಳೆ ಎಂದು ತಿಳಿಸಿದ್ದಾರೆ.

ಮಹಿಳೆಗೆ ಇಬ್ಬರು ಮಕ್ಕಳಿದ್ದು, ಮೃತ ಮಗು ಕಿರಿಯ ಮಗುವಾಗಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿತ್ತು. ಆರೋಗ್ಯದ ದೃಷ್ಟಿಯಿಂದ ಮಗುವಿಗೆ ಮತ್ತು ತನಗೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮಹಿಳೆ ಮಗುವನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ