ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಸಹೋದರ ಸಂಬಂಧಿ

ಸೋಮವಾರ, 4 ಡಿಸೆಂಬರ್ 2023 (10:39 IST)
ಆರೋಪಿ ಬಾಲಕಿಯನ್ನು ಕೋಣೆಯಲ್ಲಿ ಕೂಡಿಹಾಕಿ ರಾತ್ರಿಪೂರ್ತಿ ನಾಲ್ಕು ಬಾರಿ ಅತ್ಯಾಚಾರವೆಸಗಿ, ಯಾರಿಗಾದರೂ ತಿಳಿಸಿದಲ್ಲಿ ಕುಟುಂಬವನ್ನೇ ಸರ್ವನಾಶ ಮಾಡುವುದಾಗಿ ಬೆದರಿಸಿ ಬೆಳಿಗ್ಗೆ ಬಾಲಕಿಯನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆ. ಇದೀಗ ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಆರೋಪಿಯನ್ನು ಬಂಧಿಸಲಾಗಿದೆ.
 
ಸಹೋದರ ಸಂಬಂಧಿಯಾದ 28 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸಹೋದರಿಯ ಮೇಲೆ ಒಂದೇ ರಾತ್ರಿಯಲ್ಲಿ ನಾಲ್ಕು ಬಾರಿ ಅತ್ಯಾಚಾರವೆಸಗಿ ಮನೆಯಲ್ಲಿ ಮಾಹಿತಿ ನೀಡಿದಲ್ಲಿ ಎಲ್ಲರನ್ನು ಹತ್ಯೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು 16 ವರ್ಷ ವಯಸ್ಸಿನ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
 
ಸುಮಾರು ಒಂದು ವಾರಗಳ ಕಾಲ ಮೌನವಾಗಿದ್ದ ಬಾಲಕಿ, ಮತ್ತೆ ಮತ್ತೆ ಸೆಕ್ಸ್‌ನಲ್ಲಿ ಪಾಲ್ಗೊಳ್ಳುವಂತೆ ಆರೋಪಿ ಒತ್ತಾಯಿಸತೊಡಗಿದಾಗ ನಂತರ ಧೈರ್ಯ ತಂದುಕೊಂಡು ತಂದೆಗೆ ಘಟನೆಯನ್ನು ವಿವರಿಸಿದ್ದಾಳೆ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
 
ಆರೋಪಿ ಜಾವೇದ್ ಜಮನ್ ಶೇಕ್ ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದು, ಅತ್ಯಾಚಾರವೆಸಗಿದ ಬಾಲಕಿಯ ಚಿಕ್ಕಮ್ಮನ ಮಗನಾಗಿದ್ದಾನೆ ಎಂದು ಘಾಟಕೋಪರ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿ ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬವನ್ನು ಸಂಪರ್ಕಿಸಿ ಮನೆಯಲ್ಲಿ ಸಹೋದರಿಯ ಆರೋಗ್ಯ ಸರಿಯಿಲ್ಲವಾದ್ದರಿಂದ ನೆರವಿಗೆ ಬಾಲಕಿಯನ್ನು ಮನೆಗೆ ಕಳುಹಿಸಿಕೊಡುವಂತೆ ಕೋರಿದ್ದಾನೆ. ಸಹೋದರ ಸಂಬಂಧಿಯಾಗಿದ್ದರಿಂದ ಮನೆಯವರು ಆತನ ಜೊತೆ ಕಳುಹಿಸಿಕೊಟ್ಟಿದ್ದಾರೆ.
 
ಆದರೆ, ಆರೋಪಿ ಶೇಖ್ ತನ್ನ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗುವ ಬದಲು ತನ್ನ ಗೆಳೆಯನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅನುಮಾನ ಬಂದಂತಾಗಿ ಬಾಲಕಿ ತನ್ನನ್ನು ಮನೆಗೆ ವಾಪಸ್ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದ್ದಾಳೆ.
 
ಆದರೆ, ಪ್ರತಿನಿತ್ಯ ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಆರೋಪಿ ಒತ್ತಾಯಿಸತೊಡಗಿದಾಗ ಬೆದರಿದ ಬಾಲಕಿ ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಆರೋಪಿಯನ್ನು ಪೊಲೀಸರು ಬಂಧಿಸಿ ಅತ್ಯಾಚಾರ, ಬೆದರಿಕೆ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ