ಹಣಕ್ಕಾಗಿ ತಂದೆಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಮಗ!?

ಭಾನುವಾರ, 20 ನವೆಂಬರ್ 2022 (09:15 IST)
ಭೋಪಾಲ್ : ತಂದೆ ಹೆಸರಿನಲ್ಲಿರುವ ಅಪಘಾತ ವಿಮೆ ಹಣವನ್ನು ಪಡೆಯುವ ಸಲುವಾಗಿ ಸುಪಾರಿ ಕಿಲ್ಲರ್ಸ್ಗೆ ಹಣ ನೀಡಿ ತಂದೆಯನ್ನೇ ಮಗ ಕೊಲ್ಲಿಸಿರುವ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಡೆದಿದೆ.

ನವೆಂಬರ್ 10 ರಂದು ತನ್ನ 52 ವರ್ಷದ ತಂದೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಸೆಂಧ್ವಾ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾನೆ.

ನಂತರ ಅಪಘಾತ ನಡೆದ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಇದೊಂದು ಕೊಲೆ ಎಂಬ ತೀರ್ಮಾನಕ್ಕೆ ಬಂದರು. ಅಲ್ಲದೇ ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ವ್ಯಕ್ತಿಗೆ ಡಿಕ್ಕಿ ಹೊಡೆದ ವಾಹನ ಕೆಲವು ಸಮಯದಿಂದಲೂ ಒಂದೇ ಸ್ಥಳದಲ್ಲಿ ಸುತ್ತಾಡಿರುವುದು ಕಂಡು ಬಂದಿದೆ.

ವ್ಯಕ್ತಿ ಪ್ರತಿದಿನ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದರು. ಅದೇ ರೀತಿ ನವೆಂಬರ್ 10 ರಂದು ತನ್ನ ತಂದೆ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾರೆ ಎಂದು ಆರೋಪಿ ಸುಪಾರಿ ಕಿಲ್ಲರ್ಸ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಎಂದು ಸೆಂಧ್ವಾ ಪೊಲೀಸ್ ಠಾಣೆಯ ಉಸ್ತುವಾರಿ ರಾಜೇಶ್ ಯಾದವ್ ಹೇಳಿದ್ದಾರೆ. 

ಘಟನೆ ಬಳಿಕ ಪುಣೆಯಲ್ಲಿ ಕರಣ್ ಶಿಂಧೆ ಎಂಬ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ವ್ಯಕ್ತಿಯ ಮಗನೇ ತಂದೆಯನ್ನು ಕೊಲೆ ಮಾಡಲು 2.5 ಲಕ್ಷ ರೂಪಾಯಿ ಸುಪಾರಿ ನೀಡಿರುವ ವಿಚಾರ ಬಾಯ್ಬಿಟ್ಟಿದ್ದಾನೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ