ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ನೇಣಿಗೆ ಹಾಕಿ ಎಂದ ಉಷಾ ಠಾಕೂರ್
ಶುಕ್ರವಾರ, 4 ನವೆಂಬರ್ 2022 (09:38 IST)
ಭೋಪಾಲ್ : ವಾರದ ಆರಂಭದಲ್ಲಿ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ನಡೆದ ನಾಲ್ಕು ವರ್ಷದ ಬಾಲಕಿ ಮೇಲಿನ ಅತ್ಯಾಚಾರವನ್ನು ಖಂಡಿಸಿ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಅವರು,
ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಈ ರೀತಿಯ ಕಠಿಣ ಶಿಕ್ಷೆ ನೀಡುವುದರಿಂದ ಮತ್ತೆ ಇಂತಹ ಕೃತ್ಯವೆಸಗಲು ಯಾರೂ ಧೈರ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಧ್ಯಪ್ರದೇಶ ಸರ್ಕಾರವು ಇಂತಹ ಅನಾಗರಿಕ ಕೃತ್ಯಗಳ ವಿರುದ್ಧ ಕಠಿಣವಾಗಿ ಮತ್ತು ಎಚ್ಚರದಿಂದ ವ್ಯವಹರಿಸುತ್ತಿದೆ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಲು ಅವಕಾಶ ಮಾಡಿ ಕೊಟ್ಟ ದೇಶದ ಮೊದಲ ರಾಜ್ಯ ಇದಾಗಿದೆ.
ಇಲ್ಲಿಯವರೆಗೆ ಅತ್ಯಾಚಾರ ಕೃತ್ಯವೆಸಗಿದ 72 ಮಂದಿಗೆ ಮರಣದಂಡನೆ ವಿಧಿಸಲಾಗಿದೆ. ಆದರೂ ಅತ್ಯಾಚಾರಗಳು ನಡೆಯುತ್ತಲೇ ಇದೆ. ಇದು ಸಮಾಜಕ್ಕೆ, ಪ್ರಜಾಪ್ರಭುತ್ವಕ್ಕೆ, ಮಾಧ್ಯಮ ಮತ್ತು ನಮ್ಮೆಲ್ಲರಿಗೂ ಆತಂಕಕಾರಿ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.