ಕರ್ನಾಟಕ ಬಸ್ಸುಗಳ ಮೇಲೆ ಕಲ್ಲು ತೂರಾಟ!

ಸೋಮವಾರ, 20 ಡಿಸೆಂಬರ್ 2021 (17:10 IST)
ಯಾದಗಿರಿ : ರಾಜ್ಯದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ ಕೂಡ ಎಂಇಎಸ್ ಕಾರ್ಯಕರ್ತರು ಬಸ್ಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ಮೆರೆಯುತ್ತಿದ್ದಾರೆ.
 
ಈ ಹಿನ್ನೆಲೆ ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳಿದ ಬಸ್ಗಳು ರಾಜ್ಯಕ್ಕೆ ಮರಳಿದ್ದಾವೆ. ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರಿ ಜಿಲ್ಲೆಯ ಗುರುಮಠಕಲ್, ಶಹಾಪುರ, ಸುರಪುರ, ಯಾದಗಿರಿ ವಿಭಾಗದ ಬಸ್ ಗಳನ್ನು ಮಹಾರಾಷ್ಟ್ರ ದಿಂದ ರಿಟರ್ನ್ ತರಲಾಗಿದೆ.

ನಿನ್ನೆ ತಾನೆ ಶಹಾಪುರ ಡಿಪೋದ ಬಸ್ ಮೇಲೆ ಪುಣೆಯ ಬಸ್ ನಿಲ್ದಾಣದಲ್ಲಿ ಎಂಇಎಸ್ ಕಾರ್ಯಕರ್ತರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಬಸ್ ನ ಗ್ಲಾಸ್ ಗಳು ಜಖಂ ಮಾಡಿದ್ದರು. ಅದೇ ರೀತಿ ಚಾಲಕ ಹಾಗೂ ನಿರ್ವಾಹಕರಿಗೆ ಜೀವ ಬೇದರಿಕೆ ಹಾಕಿದ್ದರು.

ಈ ಘಟನೆ ನಂತರ ಮಹಾರಾಷ್ಟ್ರಕ್ಕೆ ತೆರಳಿದ ಬಸ್ ಗಳು ರಾತ್ರೋ ರಾತ್ರಿ ಯಾದಗಿರಿ ಜಿಲ್ಲೆಗೆ ಮರಳಿ ತರಲಾಗಿದೆ. ಜಿಲ್ಲೆಯ 27 ಬಸ್ ಗಳು ರಿಟರ್ನ್ ಬಂದಿವೆ. ಎರಡು ಬಸ್ ಗಳು ಮಾತ್ರ ಇನ್ನೂ ಮಹಾರಾಷ್ಟ್ರದಲ್ಲಿದ್ದು ಇಂದು ರಾತ್ರಿ ರಿಟರ್ನ್ ಆಗುವ ನಿರೀಕ್ಷೆ ಇದೆ. ಎಂಇಎಸ್ ಪುಂಡಾಟ ಹಿನ್ನೆಲೆ ಬಸ್ ಗಳು ಮಹಾರಾಷ್ಟ್ರಕ್ಕೆ ಸಂಚಾರ ಮಾಡದೇ ಇರುವುದರಿಂದ 5 ಲಕ್ಷ ರೂ ನಷ್ಟು ಆದಾಯ ನಷ್ಟವಾಗಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ