ಅಖಿಲ ಕರ್ನಾಟಕ ಬ್ರಾಹ್ಮಣ ಸಂಘ ನೂತನ ಅಧ್ಯಕ್ಷರಾಗಿ ಅಶೋಕ್ ಹಾರನಹಳ್ಳಿ

ಸೋಮವಾರ, 20 ಡಿಸೆಂಬರ್ 2021 (14:11 IST)
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಹಿರಿಯ ವಕೀಲ ಮತ್ತು ಮಾಜಿ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಆಯ್ಕೆಯಾಗಿದ್ದಾರೆ. ಭಾನುವಾರ (ಡಿ 19) ಎರಡನೇ ಹಂತದ ಮತದಾನ ನಡೆದ ನಂತರ ಮತಎಣಿಕೆ ನಡೆದಿದೆ.
ಇಡೀ ಚುನಾವಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.ರಾಜ್ಯಾದ್ಯಂತ ಕೇವಲ ಶೇ. 25ರಷ್ಟು ಮಾತ್ರ ಮತದಾನವಾಗಿತ್ತು. ಒಟ್ಟು 41 ಸಾವಿರ ಮತದಾರರ ಪೈಕಿ 10,711 ಮತಗಳಷ್ಟೇ ಚಲಾವಣೆಯಾಗಿದ್ದವು. ಮುಂದಿನ ಮೂರು ವರ್ಷಕ್ಕೆ ಹಾರನಹಳ್ಳಿಯವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
 
ಹಾರನಹಳ್ಳಿಯವರು 455 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರೆ, ಇವರ ಪ್ರತಿಸ್ಪರ್ಧಿ ಮತ್ತು ಉದ್ಯಮಿಯೂ ಆಗಿರುವ ಎಸ್.ರಘುನಾಥ್ ಅವರಿಗೆ 3,969 ಮತ್ತು ಆರ್. ಲಕ್ಷ್ಮೀಕಾಂತ್ ಅವರಿಗೆ 2,239 ಮತಗಳು ಬಿದ್ದಿದ್ದಾವೆ.
 
ನಗರದ ಶಂಕರಪುರದಲ್ಲಿರುವ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಎರಡನೇ ಹಂತದ ಮತದಾನ ನಡೆದಿತ್ತು. ಬ್ರಾಹ್ಮಣ ಮಹಾಸಭಾವು ಬೆಂಗಳೂರಿನಲ್ಲಿ ಅತಿಹೆಚ್ಚು ಮತದಾರರನ್ನು ಹೊಂದಿದೆ. ಹಾಗಾಗಿ, ಭಾರೀ ಪೊಲೀಸ್ ಬಂದೋಬಸ್ತ್ ಅನ್ನು ಮಾಡಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ