ರೈಲ್ವೆ ನಿಲ್ದಾಣದಲ್ಲಿ ಮೂರು ವರ್ಷದ ಬಾಲಕಿ ಮೇಲೆ ರೇಪ್!

ಮಂಗಳವಾರ, 7 ಮಾರ್ಚ್ 2023 (09:03 IST)
ಮುಂಬೈ : ಮೂರು ವರ್ಷದ ಬಾಲಕಿಯ ಮೇಲೆ ಚಿಂದಿ ಆಯುವವನೊಬ್ಬ ಅತ್ಯಾಚಾರವೆಸಗಿದ ಘಟನೆ ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ.
 
ಪನ್ವೇಲ್ ರೈಲು ನಿಲ್ದಾಣದಲ್ಲಿ ತಾಯಿಯೊಂದಿಗೆ 3 ವರ್ಷದ ಬಾಲಕಿ ಮಲಗಿತ್ತು. ಈ ವೇಳೆ ಚಿಂದಿ ಆಯುವವನು ಬಾಲಕಿಯನ್ನು ಎತ್ತಿಕೊಂಡು ಪಕ್ಕಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಅವನು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ.

ಈ ವೇಳೆ ದೂರದಲ್ಲಿ ಮಗು ಅಳುತ್ತಿರುವುದನ್ನು ತಾಯಿ ಕೇಳಿಸಿಕೊಂಡಿದ್ದಾಳೆ. ಅದಾದ ಬಳಿಕ ಬಾಲಕಿಯನ್ನು ಹುಡುಕುತ್ತಾ ಆಕೆ ಇದ್ದ ಸ್ಥಳಕ್ಕೆ ತಾಯಿ ತಲುಪಿದ್ದಾಳೆ. ಈ ವೇಳೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ