ಮಹಿಳೆಯ ಖಾಸಗಿ ಅಂಗಕ್ಕೆ ಸಿಗರೇಟ್ನಿಂದ ಸುಟ್ಟು ವಿಕೃತಿ!

ಸೋಮವಾರ, 5 ಡಿಸೆಂಬರ್ 2022 (10:33 IST)
ಮುಂಬೈ : ಮಹಿಳೆಯೊಬ್ಬರ ಮನೆಗೆ ನುಗಿದ್ದ ಮೂವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಹರಿತವಾದ ಕತ್ತಿಯಿಂದ ಹಲ್ಲೆ ಮಾಡಿ,

ಸಿಗರೇಟ್ ನಿಂದ ಆಕೆಯ ಖಾಸಗಿ ಭಾಗಗಳನ್ನು ಸುಟ್ಟು ವಿಕೃತಿ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮುಂಬೈನ ಕುರ್ಲಾದಲ್ಲಿರುವ 42 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದಿದ್ದು, ಹರಿತವಾದ ಆಯುಧಗಳಿಂದ ಮಹಿಳೆಗೆ ಕಿರುಕುಳ ನೀಡಲಾಗಿದೆ. ಅತ್ಯಾಚಾರ ಎಸಗಿದ ಕಾಮುಕರು ಹಾಗೂ ಸಂತ್ರಸ್ತೆ ಒಂದೇ ಪ್ರದೇಶದವರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಮಹಿಳೆ ಒಂಟಿಯಾಗಿರುವುದನ್ನು ನೋಡಿಕೊಂಡ ಕಾಮುಕರು ಒಬ್ಬೊಬ್ಬರಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಮನಸ್ಸೋ ಇಚ್ಚೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಆಕೆಯ ಖಾಸಗಿ ಭಾಗಗಳನ್ನು ಸಿಗರೇಟ್ನಿಂದ ಸುಟ್ಟಿದ್ದಾರೆ. ಎದೆ ಭಾಗದ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದಾರೆ.

ಅದರಲ್ಲೊಬ್ಬ ಕೃತ್ಯವನ್ನೂ ವೀಡಿಯೋ ಮಾಡಿಕೊಂಡಿದ್ದು, ಪೊಲೀಸರಿಗೆ ಹೇಳಿದ್ರೆ ಜಾಲತಾಣದಲ್ಲಿ ವೀಡಿಯೋ ಹರಿಯಬಿಡೋದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ