ನಗರದ ಇ ಸಿಗರೇಟ್ ಮಾರಾಟ ಮಾಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ದಾಳಿ

ಬುಧವಾರ, 30 ನವೆಂಬರ್ 2022 (15:42 IST)
ನಿಷೇಧಿತ ಇ- ಸಿಗರೇಟ್ ಮಾರಾಟ ಮಾಡ್ತಿದ್ದ ಅಡ್ಡೆಗಳ‌ ಮೇಲೆ ತಡರಾತ್ರಿ ಸಿಸಿಬಿ ದಾಳಿ ನಡೆಸಿದ್ದು, ಅಂದಾಜು 50 ಲಕ್ಷಕ್ಕೂ ಹೆಚ್ಚು ಮೌಲ್ಯದ ಇ-ಸಿಗರೇಟ್ ಜಪ್ತಿ ಮಾಡಲಾಗಿದೆ.ಕೋರಮಂಗಲ, ಬಾಣಸವಾಡಿ, ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿನ ಅಂಗಡಿಗಳ‌ ಮೇಲೆ ದಾಳಿ ಮಾಡಿದ್ದು,2019ರಲ್ಲಿ ಇ-ಸಿಗರೇಟ್ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.ಕೇಂದ್ರ ಸರ್ಕಾರದಿಂದ ಬ್ಯಾನ್ ಗೊಳಿಸಿ ಆದೇಶ ಹೊರಡಿಸಿತ್ತು .ಆದರೂ  ಬೆಂಗಳೂರಿನಲ್ಲಿ ಅಕ್ರಮವಾಗಿ ಕೇರಳ ಮೂಲದ ಆರೋಪಿಗಳು, ವಿದೇಶದಿಂದ ಅಮದು‌ ಮಾಡಿಕೊಂಡು ನಗರದಲ್ಲಿ ಮಾರಾಟ ಮಾಡ್ತಿದ್ದರು .
 
ಇತ್ತೀಚೆಗೆ ಹೆಚ್ಚಾಗಿ  ಇ-ಸಿಗರೇಟ್ ಗೆ ಯುವ ಪೀಳಿಗೆ ಮೊರೆ ಹೋಗುತ್ತಿದ್ರು.ಒಂದು ಇ- ಸಿಗರೇಟ್ ಬೆಲೆ 5 ಸಾವಿರದವರೆಗೆ ಇರಬಹುದು .ಇಂತಹ ಇ -ಸಿಗರೇಟ್ ಮಾರಾಟದ ಬಗ್ಗೆ ಪಕ್ಕಾ ಮಾಹಿತಿಯನ್ನ ಸಿಸಿಬಿ ಪಡೆದಿದ್ದು,ಕೇರಳ ಮೂಲದ ಕೆಲವರನ್ನ ವಶಕ್ಕೆ ಪಡೆದು 50ಲಕ್ಷಕ್ಕೂ ಹೆಚ್ಚು ಮೌಲ್ಯದ ಇ ಸಿಗರೇಟ್ ಜಪ್ತಿ ಮಾಡಿದ್ದಾರೆ.ಪುಲಕೇಶಿ ನಗರ, ಬಾಣಸವಾಡಿ, ಕೋರಮಂಗಲ ಪೊಲೀಸ್  ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ