ಪ್ರಿಯತಮನಿಂದಲೇ ಕೊಲೆಯಾದ ಯುವತಿ. ಯುಧಿಸ್ಠಿರ್ ಕೊಲೆ ಮಾಡಿದ ಆರೋಪಿ. ಆರೋಪಿ ಯುಧಿಸ್ಠಿರ್ ಪ್ರೇಯಸಿಯ ಮನೆ ಸಮೀಪದ ಏರಿಯಾದಲ್ಲಿ ವಾಸಿಸುತ್ತಿದ್ದು, ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಆಕೆಗೆ ಬೇರೆಯವರ ಜೊತೆ ಮದುವೆ ನಿಶ್ಚಯವಾಗಿತ್ತು.ಇದರಿಂದ ಕೋಪಗೊಂಡಿದ್ದ ಆರೋಪಿ ಯುಧಿಸ್ಠಿರ್ ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ನೋಡಲು ಕರೆದುಕೊಂಡು ಹೋಗಿ ಆಕೆಯ ಗಂಟಲನ್ನು ಸೀಳಿ ತಲೆಯನ್ನು ಕತ್ತರಿಸಿ ಕೊಲೆ ಮಾಡಿದ್ದಾನೆ.
ಸಸ್ಮಿತಾ ಬಿಸ್ವಾಲ್ ನಾಪತ್ತೆಯಾಗಿದ್ದು, ಆಕೆಯ ಕುಟುಂಬದವರು ಪೊಲೀಸರಿಗೆ ನಾಪತ್ತೆಯ ದೂರು ನೀಡಿದ್ದರು. ತಲೆ ಇಲ್ಲದ ಯುವತಿಯ ದೇಹವೊಂದು ಭುವನೇಶ್ವರ ಹೊರವಲಯದಲ್ಲಿರುವ ಚಂದಕ ಅರಣ್ಯ ವಿಭಾಗದಲ್ಲಿ ಪತ್ತೆಯಾಗಿದ್ದು, ತನಿಖೆಯ ವೇಳೆ ಮೃತ ಯುವತಿ ಎಂಬುದಾಗಿ ತಿಳಿದುಬಂದಿದೆ. ಈ ಬಗ್ಗೆ ಪ್ರಿಯತಮ ಯುಧಿಸ್ಠಿರ್ ನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯಾಂಸ ಬಾಯಿಬಿಟ್ಟಿದ್ದಾನೆ. ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.