ಕಾರ್ ಅಪಘಾತ: ಪ್ರಾಣಾಪಾಯದಿಂದ ಪಾರಾದ ಆದಿತ್ಯ ಠಾಕ್ರೆ

ಸೋಮವಾರ, 16 ಜನವರಿ 2017 (08:18 IST)
ಯುವಸೇನೆಯ ಮುಖ್ಯಸ್ಥ ಆದಿತ್ಯ ಠಾಕ್ರೆ ಪ್ರಯಾಣಿಸುತ್ತಿದ್ದ ಕಾರ್‌ಗೆ ವೇಗದಿಂದ ಬರುತ್ತಿದ್ದ ಮತ್ತೊಂದು ವಾಹನ ಡಿಕ್ಕಿ ಹೊಡೆದ ಘಟನೆ ಮುಂಬೈನಲ್ಲಿ ನಡೆದಿದೆ. ಬಾಂದ್ರಾದಲ್ಲಿರುವ ಠಾಕ್ರೆ ನಿವಾಸದ ಬಳಿಯಲ್ಲೇ ಈ ದುರ್ಘಟನೆ ನಡೆದಿದ್ದು ಅದೃಷ್ಟವಶಾತ್ ಆದಿತ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
 

 
ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ಪುತ್ರರಾದ ಆದಿತ್ಯ (26) ಈ ಅವಘಡದ ಬಗ್ಗೆ ಟ್ವೀಟ್ ಮಾಡಿದ್ದು, ತಾವು ಸುರಕ್ಷಿತವಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. 
 
"ನಿಮ್ಮ ಕಾಳಜಿ ಮತ್ತು ಫೋನ್ ಕರೆಗಳಿಗೆ ಧನ್ಯವಾದಗಳು. ವೇಗವಾಗಿ ಬರುತ್ತಿದ್ದ ಕಾರೊಂದು ಕಲಾನಗರ ಜಂಕ್ಷನ್ ನನ್ನ ಕಾರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತವಾಯ್ತು. ನಾನು ಸುರಕ್ಷಿತವಾಗಿದ್ದೇನೆ ", ಎಂದು ಆದಿತ್ಯ ಟ್ವೀಟ್ ಮಾಡಿದ್ದಾರೆ.
 
ಠಾಕ್ರೆ ಕುಟುಂಬ ಬಾಂದ್ರಾದ ಕಲಾನಗರ ಪ್ರದೇಶದಲ್ಲಿರುವ 'ಮಾತೋಶ್ರೀ' ಬಂಗಲೆಯಲ್ಲಿ ವಾಸವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ