ಫೇಸ್ ಬುಕ್ ಪೋಸ್ಟ್ ನಿಂದ ಅಧಿಕಾರ ಕಳೆದುಕೊಂಡ ಅಧಿಕಾರಿ

ಬುಧವಾರ, 21 ಜೂನ್ 2017 (12:37 IST)
ಹೈದರಾಬಾದ್: ಫೇಸ್ ಬುಕ್ ನಲ್ಲಿ ತಮ್ಮ ವಿರುದ್ಧ ಆಕ್ಷೇಪಿಸಿ ಬರೆದ ಆಂಧ್ರಪ್ರದೇಶದ ಬ್ರಾಹ್ಮಣ ಕ್ಷೇಮ ಸಂಘದ ಅಧ್ಯಕ್ಷ ಕೃಷ್ಣ ರಾವ್ ರನ್ನು ಸಿಎಂ ಚಂದ್ರ ಬಾಬು ನಾಯ್ಡು ವಜಾಗೊಳಿಸಿದ್ದಾರೆ.

 
ಕೃಷ್ಣ ರಾವ್ ಈ ಹಿಂದೆ ಸರ್ಕಾರಿ ಅಧಿಕಾರಿಯಾಗಿದ್ದವರು ಹಾಗೂ ಚಂದ್ರಬಾಬು ನಾಯ್ಡುಗೆ ನಿಕಟವರ್ತಿಯಾಗಿದ್ದರು. ಇದೇ ಕಾರಣಕ್ಕೆ ನಿವೃತ್ತಿಯ ನಂತರವೂ ಸಿಎಂ ಬಾಬು ಕೃಷ್ಣ ರಾವ್ ಗೆ ಉತ್ತಮ ಹುದ್ದೆಯನ್ನು ನೀಡಿದ್ದರು.

ಆದರೆ ಅದೇನಾಯ್ತೋ ಗೊತ್ತಿಲ್ಲ. ಸಿಎಂ ಸಾಹೇಬರು ತಮ್ಮ ಸಂಬಂಧಿ ಎನ್. ಬಾಲಕೃಷ್ಣನ್ ಅಭಿನಯದ ಗೌತಮಿಪುತ್ರ ಶಾತಕರಣಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದನ್ನು ಕೃಷ್ಣರಾವ್ ತಮ್ಮ ಫೇಸ್ ಬುಕ್ ನಲ್ಲಿ ಬಹಿರಂಗವಾಗಿಯೇ ಟಿಕಿಸಿದ್ದರು. ಇದೇ ಕಾರಣಕ್ಕೆ ಅವರೀಗ ಹುದ್ದೆಯನ್ನೇ ಕಳೆದುಕೊಂಡು ಮನೆಯಲ್ಲಿ ಕೂರುವಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ