ಕೆಲವು ಟಿವಿ ಚಾನೆಲ್‌ಗಳಿಗೆ ಸಂಜೆ ಸಿಡಿಗಳು ಸೋರಿಕೆಯಾಗಿದ್ದು, ಮುಖ್ಯಮಂತ್ರಿ ಪ್ರತಿಕ್ರಿಯೆಗಾಗಿ ಅವರಿಗೆ ಪ್ರತಿಯೊಂದನ್ನು ಕಳಿಸಿದ್ದವು. ಎಎಪಿ ಗೊಂದಲಕಾರಿ ಸ್ಥಿತಿಯಲ್ಲಿ ಸಿಲುಕಿತು. ತಡರಾತ್ರಿವರೆಗೆ ಮುಖ್ಯಮಂತ್ರಿಗಳ ಫ್ಲಾಗ್‌ಸ್ಟಾಫ್ ರಸ್ತೆ ಬಂಗ್ಲೆಯಲ್ಲಿ ಮುಂದಿನ ಕ್ರಮದ ಬಗ್ಗೆ ಚರ್ಚೆ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಗೆ ಕುಮಾರ್ ಅವರಿಗೆ ಬದಲಿಯಾಗಿ ಯಾರನ್ನು ನೇಮಿಸಬೇಕೆಂಬ ಬಗ್ಗೆ ಕೂಡ ಚರ್ಚೆ ನಡೆಯಿತು.
ಎಎಪಿ ಸಿದ್ಧಾಂತಗಳ ಪಕ್ಷ, ಭ್ರಷ್ಟಾಚಾರ, ಹಗರಣಗಳ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ. ಲಂಚ ತೆಗೆದುಕೊಂಡಿದನ್ನು ಕಂಡ ಸಚಿವರನ್ನು ತಕ್ಷಣವೇ ವಜಾ ಮಾಡಲಾಗಿದೆ. ಯಾವುದೇ ಸದಸ್ಯರ ಸ್ಥಾನಮಾನ ಅಥವಾ ಹುದ್ದೆಯನ್ನು ಪರಿಗಣಿಸದೇ ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ನುಡಿದರು.