ಇಸ್ರೇಲ್, ಇರಾನ್ ಯುದ್ಧ ಆದ್ರೆ ಟೆನ್ಷನ್ ಪಾಕಿಸ್ತಾನಕ್ಕೆ: ಯಾಕೆ ಗೊತ್ತಾ
ನಿನ್ನೆ ಬೆಳಿಗ್ಗೆ ಇರಾನ್ ನ ಪರಮಾಣು ಕೇಂದ್ರಗಳನ್ನು ಗುರಿಯಾಗಿರಿಸಿ ಇಸ್ರೇಲ್ ದಾಳಿ ನಡೆಸಿತ್ತು. ಇಸ್ರೇಲ್ ದಾಳಿಗೆ ತಕ್ಕ ಸೇಡು ತೀರಿಸಿಕೊಳ್ಳುವುದಾಗಿ ಇರಾನ್ ಪರಮೋಚ್ಛ ನಾಯಕ ಅಯತೊಲ್ಲಾ ಖಮೇನಿ ಪ್ರತಿಜ್ಞೆ ಮಾಡಿದ್ದಾರೆ. ಇಸ್ರೇಲ್ ದಾಳಿಯನ್ನು ನೋಡುತ್ತಾ ಕೂರಲ್ಲ ಎಂದಿದ್ದಾರೆ.
ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಟೆನ್ಷನ್ ಶುರುವಾಗಿದೆ. ಎರಡೂ ದೇಶಗಳು ತಕ್ಷಣವೇ ಜಾಗತಿಕ ಶಾಂತಿ ಕದಡುವ ಈ ಯುದ್ಧವನ್ನು ಕೊನೆಗೊಳಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣವೂ ಇದೆ.
ಇರಾನ್ ಜೊತೆಗೆ ಪಾಕಿಸ್ತಾನ ನಿಕಟ ಸಂಬಂಧ ಹೊಂದಿದೆ. ಅಲ್ಲಿ ಸಾಕಷ್ಟು ಜನ ಪಾಕಿಸ್ತಾನಿಯರಿದ್ದಾರೆ. ಒಂದು ವೇಳೆ ಇರಾನ್-ಇಸ್ರೇಲ್ ನಡುವೆ ಯುದ್ಧ ತೀವ್ರವಾದರೆ ಅಲ್ಲಿರುವ ಪಾಕಿಸ್ತಾನಿಯರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಲ್ಲದೆ ಇರಾನ್ ಜೊತೆಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೂ ಪಾಕಿಸ್ತಾನ ಸಹಿ ಹಾಕಿದೆ. ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಈ ವ್ಯಾಪಾರ ಒಪ್ಪಂದ ರದ್ದಾದರೆ ಸಂಕಷ್ಟಕ್ಕೆ ಸಿಲುಕಲಿದೆ.