ಗಾಜಿಯಾಬಾದ್‌ನಲ್ಲಿರುವ ಆರುಷಿ ಪೋಷಕರು ಜೀವಾವಧಿ ಶಿಕ್ಷೆ ಪ್ರಶ್ನಿಸಿ ಸಿಬಿಐ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಬಿ.ಕೆ.ನಾರಾಯಣ ಮತ್ತು ನ್ಯಾ. ಎ.ಕೆ.ಮಿಶ‍್ರಾ ಅವರನ್ನೊಳಗೊಂಡ ಹೈಕೋರ್ಟ್ ಪೀಠವು, ಸೆಪ್ಟೆಂಬರ್ ನಲ್ಲಿ ತೀರ್ಪನ್ನು ಕಾಯ್ದಿರಿಸಿತ್ತು.
2008ರ ಮೇ 16ರಂದು ಜಲ್ ವಾಯು ವಿಹಾರ್ ನಲ್ಲಿರುವ ಫ್ಲಾಟ್ ನಲ್ಲಿರುವ ತನ್ನ ಬೆಡ್ ರೂಮಿನಲ್ಲಿ ಕೊಲೆಯಾಗಿದ್ದಳು. ಈಕೆಯ ಗಂಟಲನ್ನು ಶಸ್ತ್ರಚಿಕಿತ್ಸೆಗೆ ಬಳಸುವ ಬ್ಲೇಡ್ ನಲ್ಲಿ ಕೊಯ್ದು ಹತ್ಯೆ ಮಾಡಲಾಗಿತ್ತು. ಮೊದಲಿಗೆ ಮನೆ ಕೆಲಸದವನಾಗಿದ್ದ ಹೇಮರಾಜ್, ಆರುಷಿ ಹತ್ಯೆ ಮಾಡಿದ್ದಾನೆ ಎನ್ನಲಾಗಿತ್ತು. ಆದರೆ ಅದೇ ಮನೆಯ ಟೆರೆಸ್ ನಲ್ಲಿ 2 ದಿನದ ಬಳಿಕ ಹೇಮರಾಜ್ ಶವಪತ್ತೆಯಾದ ಬಳಿಕ ಆರುಷಿ ಕೊಲೆ ಪ್ರಕರಣ ತಿರುವು ಪಡೆದುಕೊಂಡಿತ್ತು. ಇದಾದ ಬಳಿಕ ತೀವ್ರ ವಿಚಾರಣೆ ನಡೆಸಿದಾಗ ತಲ್ವಾರ್ ದಂಪತಿಯೇ ಇಬ್ಬರನ್ನು ಹತ್ಯೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದ್ದರು.