ಮದುವೆಯಾಗಲು ಒತ್ತಾಯಿಸಿ ಮಹಿಳೆ ಮೇಲೆ ಆಸಿಡ್ ದಾಳಿ
35 ವರ್ಷದ ಮಹಿಳೆಯ ಪತಿ ತೀರಿಕೊಂಡಿದ್ದರು. ಇದಾದ ಬಳಿಕ ಮಹಿಳೆಗೆ ಮದುವೆಯಾಗುವಂತೆ ಲೋಕಲ್ ರೌಡಿಯೊಬ್ಬ ಒತ್ತಾಯಿಸುತ್ತಿದ್ದ. ಆದರೆ ಆಕೆ ಒಪ್ಪಿಕೊಂಡಿರಲಿಲ್ಲ.
ಈ ಕಾರಣಕ್ಕೆ ಆಕೆಯ ಮೇಲೆ ನಡು ರಸ್ತೆಯಲ್ಲೇ ಆಸಿಡ್ ದಾಳಿ ನಡೆಸಲಾಗಿದೆ. ತಕ್ಷಣವೇ ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.