ಕಳೆದ 13 ವರ್ಷಗಳಿಂದ ಲಿವಿಂಗ್ ಟುಗೇದರ್ ರಿಲೇಷನ್ಶಿಪ್ನಲ್ಲಿದ್ದ ಖ್ಯಾತ ನಟ ಕಮಲ್ ಹಾಸನ್ ಮತ್ತು ನಟಿ ಗೌತಮಿಯ ಸಂಬಂಧ ಅಂತ್ಯವಾಗಿದೆ.
ಕಮಲ್ ಹಾಸನ್ರೊಂದಿಗೆ ಸಂಬಂಧ ಅಂತ್ಯವಾಗಿರುವುದಕ್ಕೆ ಯಾವುದೇ ಕಾರಣವನ್ನು ಬಹಿರಂಗಪಡಿಸಲು ನಟಿ ಗೌತಮಿ ನಿರಾಕರಿಸಿದ್ದಾರೆ. ಕಮಲ್ ಹಾಸನ್ ಕೂಡಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ಪ್ರಧಾನಿ ಮೋದಿಯವರನ್ನು ಭೇಟಿಯಾದ ನಂತರ ಉಭಯರ ನಡುವೆ ಬಿರುಕು ಏರ್ಪಟ್ಟಿತ್ತು ಎನ್ನಲಾಗಿದೆ. ಆದರೆ, ಸಿನೆಮಾ ಅಥವಾ ರಾಜಕೀಯ ಕಾರಣವೋ ಎನ್ನುವ ಅಂಶ ಬಹಿರಂಗವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ