ಮೋದಿ ತವರಿನಲ್ಲಿ ಅದಾನಿ ಪುತ್ರನ ನಿಶ್ಚಿತಾರ್ಥ

ಬುಧವಾರ, 15 ಮಾರ್ಚ್ 2023 (09:26 IST)
ಗಾಂಧಿನಗರ : ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿ ಅವರ ಪುತ್ರ ಜೀತ್ ಅದಾನಿ ಅವರ ನಿಶ್ಚಿತಾರ್ಥ ಭಾನುವಾರ ನೆರವೇರಿದೆ.

ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಸರಳ ಸಮಾರಂಭದಲ್ಲಿ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ ದಿವಾ ಜೈಮಿನ್ ಶಾ ಅವರೊಂದಿಗೆ ನಿಶ್ಚಿತಾರ್ಥ ನೆರವೇರಿದೆ. ಆಪ್ತ ಬಳಗದವರು ಹಾಗೂ ಕೌಟುಂಬಿಕ ಸ್ನೇಹಿತರನ್ನಷ್ಟೇ ನಿಶ್ಚಿತಾರ್ಥಕ್ಕೆ ಆಹ್ವಾನಿಸಲಾಗಿತ್ತು ಎನ್ನಲಾಗಿದೆ. 

ಜೀತ್ ಅದಾನಿ ನಿಶ್ಚಿತಾರ್ಥದ ಫೋಟೋಗಳು ಇದೀಗ ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಕಸೂತಿ ಲೆಹೆಂಗಾದಲ್ಲಿ ವಧು ದಿವಾ ಕಂಗೊಳಿಸುತ್ತಿದ್ದಾರೆ. 

ಪೆನ್ಸಿಲ್ವೇನಿಯಾ ಸ್ಕೂಲ್ ಆಫ್ ಎಂಜಿನಿಯರಿಂಗ್ ವಿಶ್ವವಿದ್ಯಾನಿಲಯದಲ್ಲಿ ಅಪ್ಲೈಡ್ ಸೈನ್ಸಸ್ ಪದವಿ ಪೂರ್ಣಗೊಳಿಸಿದ ಜೀತ್ ಅದಾನಿ, 2019ರಲ್ಲಿ ಅದಾನಿ ಸಮೂಹ ಸೇರಿಕೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ