ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಗಳಾಗಿದ್ದ ಬುರ್ಹಾನ್ ವಾನಿ, ಸಬ್ಜಾರ್ ಭಟ್ ಹತ್ಯೆಯ ಬೆನ್ನಲ್ಲೇ 27 ಯುವ ಉಗ್ರರ ಪಡೆಯೊಂದನ್ನು ಈ ಸಂಘಟನೆ ಸಜ್ಜುಗೊಳಿಸಿದ್ದು, ಕಾಶ್ಮೀರದಲ್ಲಿ ಮತ್ತಷ್ಟು ಹಿಂಸಾಚಾರ ಸೃಷ್ಟಿಸಲು ಸಂಚು ರೂಪಿಸಿದೆ ಎನ್ನಲಾಗಿದೆ.
2015ರಲ್ಲಿ ಹಿಬ್ಜುಲ್ ಉಗ್ರ ಸಂಘಟನೆ ಕಮಾಂಡರ್ ಆಗಿದ್ದ ಬುರ್ಹಾನ್ ವಾನಿ ತನ್ನ 11 ಸಂಗಡಿಗರ ಫೋಟೋವೊಂದನ್ನು ಬಿಡುಗಡೆ ಮಾಡಿದ್ದ. ಈ ಪೈಕಿ 9 ಉಗ್ರರನ್ನು ಭಾರತೀಯ ಸೇನಾಪಡೆ ಹತ್ಯೆ ಮಾಡಿದೆ. ಇದರ ಬೆನ್ಲಲ್ಲೇ ಇದೀಗ ಉಗ್ರ ಪಡೆಗಳು ಮತ್ತೆ ಹೊಸ ಫೋಟೋವನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ ದಾಳಿ ನಡೆಸುವ ಆತಂಕ ಎದುರಾಗಿದೆ.