ಮೋಹನ್ ಭಾಗವತ್ ನಂತ್ರ, ಅಮಿತ್ ಶಾಗೂ ಅನುಮತಿ ನಿರಾಕರಿಸಿದ ದೀದಿ

ಬುಧವಾರ, 6 ಸೆಪ್ಟಂಬರ್ 2017 (20:33 IST)
ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕಾರ್ಯಕ್ರಮಕ್ಕೆ ಅನುಮತಿ ನೀಡದೆ ರದ್ದುಗೊಳಿಸಿದ್ದ ಪಶ್ಚಿಮ ಬಂಗಾಳ ಸರಕಾರ, ಮಾರನೇ ದಿನವೇ, ಮುಂದಿನ ವಾರ ನಡೆಯಲಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಾರ್ಯಕ್ರಮಕ್ಕೂ ಅನುಮತಿ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪಾಲ್ಗೊಳ್ಳಲಿರುವ ಸಭೆ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಮುಂಬರುವ 10 ರಿಂದ 13 ರವರೆಗೆ ನಡೆಯಲಿದೆ. ಕ್ರೀಡಾಂಗಣ ಬುಕ್ ಮಾಡಲು ಹೋದ ಬಿಜೆಪಿ ನಾಯಕರಿಗೆ ಕ್ರೀಡಾಂಗಣದ ಅಡಳಿತ ಮಂಡಳಿ ಅನುಮತಿ ನಿರಾಕರಿಸಿದೆ ಎನ್ನಲಾಗಿದೆ.
    
ಅಮಿತ್ ಶಾ ಪಾಲ್ಗೊಳ್ಳಲಿರುವ ಸಭೆಯಲ್ಲಿ ಕನಿಷ್ಠ 12 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ, ಕ್ರೀಡಾಂಗಣ ಅಧಿಕಾರಿಗಳು ಈಗಾಗಲೇ ಕ್ರೀಡಾಂಗಣ ಮುಂಗಡವಾಗಿ ಬುಕ್ ಮಾಡಲಾಗಿದ್ದರಿಂದ ಅಂದಿನ ದಿನಾಂಕಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸಯಂತನ್ ಬಸು ಮಾತನಾಡಿ, ಕ್ರೀಡಾಂಗಣಕ್ಕೆ ಅನುಮತಿ ನಿರಾಕರಿಸುವ ಹಿಂದೆ ಮಮತಾ ಸರಕಾರದ ಕೈವಾಡವಿದೆ ಎಂದು ಆರೋಪಿಸಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ