ರಾಹುಲ್ ಗಾಂಧಿಯಾಯ್ತು.. ಇದೀಗ ಸೋನಿಯಾ ಗಾಂಧಿ ನಾಪತ್ತೆ ಪೋಸ್ಟರ್

ಬುಧವಾರ, 16 ಆಗಸ್ಟ್ 2017 (10:25 IST)
ನವದೆಹಲಿ: ಇತ್ತೀಚೆಗಷ್ಟೇ ಅಮೇಠಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಪತ್ತೆ ಎಂದು ಪೋಸ್ಟರ್ ಕಂಡುಬಂದಿದ್ದು ಸುದ್ದಿಯಾಗಿತ್ತು. ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸರದಿ.

 
ಸೋನಿಯಾ ಪ್ರತಿನಿಧಿಸಿರುವ ರಾಯ್ ಬರೇಲಿ ಕ್ಷೇತ್ರದಲ್ಲಿ ‘ನಾಪತ್ತೆಯಾಗಿದ್ದಾರೆ. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುವುದು’ ಎಂದು ಪೋಸ್ಟರ್ ಕಂಡುಬಂದಿದೆ.

ರಾಹುಲ್ ರಂತೇ ಸೋನಿಯಾ ಕೂಡಾ ಕಳೆದೊಂದು ವರ್ಷದಿಂದ ತಮ್ಮ ಕ್ಷೇತ್ರಕ್ಕೆ ಭೇಟಿ ಕೊಟ್ಟಿಲ್ಲ. ಈ ಹಿನ್ನಲೆಯಲ್ಲಿ ಇಂತಹದ್ದೊಂದು ಪೋಸ್ಟರ್ ಪತ್ತೆಯಾಗಿದೆ.

ಇದನ್ನೂ ಓದಿ.. ಬಾಹುಬಲಿ ಪ್ರಭಾಸ್ ರೊಮ್ಯಾನ್ಸ್ ಮಾಡೋ ಹುಡುಗಿ ಪಕ್ಕಾ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ