ಭೂಕುಸಿತದ ಬೆನ್ನಲ್ಲೇ ವಯನಾಡಿನ ಜನತೆಯ ನಿದ್ದೆಗೆಡಿಸಿ ನಿಗೂಢ ಶಬ್ಧ, ಭೂಕಂಪದ ಭೀತಿಯಲ್ಲಿ ದೇವರನಾಡು

Sampriya

ಶುಕ್ರವಾರ, 9 ಆಗಸ್ಟ್ 2024 (17:20 IST)
Photo Courtesy X
ವಯನಾಡು: ಈಗಾಗಲೇ ಭೀಕರ ಭೂಕುಸಿತಕ್ಕೆ ತತ್ತರಿಸಿ ಹೋಗಿರುವ ವಯನಾಡು ಜನತೆಗೆ ಇದೀಗ ಕೇಳಿಸುತ್ತಿರುವ ನಿಗೂಢ ಶಬ್ಧಗಳು ಮತ್ತಷ್ಟು ಭಯಹುಟ್ಟಿಸಿದೆ.

ಕೇರಳದ ಭೂಕುಸಿತ ಪೀಡಿತ ವಯನಾಡು ಜಿಲ್ಲೆಯ ಎಡಕ್ಕಲ್ ಪ್ರದೇಶದಲ್ಲಿ ಭೂಮಿಯಿಂದ ಹಲವರು ಬಾರಿ ನಿಗೂಢ ಶಬ್ದ ಕೇಳಿ ಬಂದಿದೆ. ಈ ವೇಳೆ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ದೂರಿರುವ ಬಗ್ಗೆ ವರದಿಯಾಗಿದೆ.

ಘಟನೆ ಸಂಬಂಧ ತನಿಖೆ ನಡೆಸುತ್ತಿದ್ದೇವೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರದ (ಕೆಎಸ್‌ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪ ಸಂಭವಿಸಿರುವ ಬಗ್ಗೆ ಯಾವುದೇ ನಿದರ್ಶನ ಆಥವಾ ಕುರುಹುಗಳು ಸಿಕ್ಕಿಲ್ಲ. ಆದರೆ, ಸ್ಥಳೀಯರು ಆತಂಕಕ್ಕೊಳಗಾಗಿದ್ದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನೂ ಜುಲೈ 10ರಂದು ನಡೆದ ಎರಡು ಭೀಕರ ಭೂಕುಸಿತದಲ್ಲಿ 300ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ, 300ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ