ಎರಡು ಎಲೆಗಾಗಿ ಲಂಚ: ದಿನಕರನ್ ಪರವಾಗಿ ಹಣ ಪೂರೈಸಿದ್ದ ಹವಾಲಾ ಆಪರೇಟರ್ ಅರೆಸ್ಟ್

ಶುಕ್ರವಾರ, 28 ಏಪ್ರಿಲ್ 2017 (11:23 IST)
ಅಣ್ಣಾಡಿಎಂಕೆಯ ಎರಡು ಎಲೆ ಚಿಹ್ನೆಗಾಗಿ ಚುನಾವಣಾ ಆಯೋಗಕ್ಕೆ 50 ಕೋಟಿ ರೂ. ಲಂಚದ  ಆಮಿಶವಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಮುಖಂಡ ಟಿಟಿವಿ ದಿನಕರನ್ ವಿರುದ್ಧದ ತನಿಖೆಯನ್ನ ದೆಹಲಿ ಪೊಲೀಸರು ಮತ್ತಷ್ಟು ಚುರುಕುಗೊಳಿಸಿದ್ದಾರೆ.
 

ಪ್ರಕರಣಕ್ಕೆ ಸಂಬಂಧಿಸಿದಂತೆ ಹವಾಲಾ ಆಪರೇಟರ್ ಒಬ್ಬನನ್ನ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಿನಕರನ್ ಪರವಾಗಿ ಮುಂಗಡ 10 ಕೋಟಿ ರೂ. ಗಳನ್ನ ಮಧ್ಯವರ್ತಿ ಸುಖೇಶ್ ಚಂದ್ರಶೇಖರ್ ನೀಡಿದ್ದ ಆರೋಪಡಿ ಹವಾಲಾ ಆಪರೇಟರನ್ನ ಬಂಧಿಸಲಾಗಿದೆ. ಇದರ ಜೊತೆಗೆ ಥೈಲ್ಯಾಂಡ್`ನಿಂದ ಬಂದ ಮತ್ತೊಬ್ಬ ವ್ಯಕ್ತಿಯನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಚಿಹ್ನೆಗಾಗಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗಳವಾರ ರಾತ್ರಿಯೇ ದಿನಕರನ್ ಮತ್ತು ಆತನ ಸ್ನೇಹಿತ ಮಲ್ಲಿಕಾರ್ಜುನ್ ಎಂಬಾತನನ್ನ ಬಂಧಿಸಿರುವ ಪೊಲೀಸರ ತೀವ್ರ ವಿಚಾರಣೆ ನಡೆಸಿದ್ದಾರೆ. ಈ ಮಧ್ಯೆ, ದೆದಲಿಯಿಂದ ಚೆನ್ನೈಗೂ ಕರೆ ತಂದಿದ್ದ ಪೊಲೀಸರು ದೂರವಾಣಿ ಕರೆ ದಾಖಲೆ ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಮಧ್ಯವರ್ತಿಗೆ ನೀಡಲು ದಿನಕರನ್ ಅಘೋಷಿತ ಮೂಲದಿಂದ ನೀಡಿದ ಹಣವನ್ನ ಅಕ್ರಮವಾಗಿ ದೆಹಲಿಗೆ ತಲುಪಿಸಿದ ಆರೋಪ ಮಲ್ಲಿಕಾರ್ಜುನ್ ಮೇಲಿದೆ. ಹವಾಲಾ ಆಪರೇಟರ್ ಮೂಲಕ ಹಣ ಪಡೆದ ಸುಖೇಶ್ ಚಂದ್ರಶೇಖರ್, ಚುನಾವಣಾ ಆಯೋಗವನ್ನ ಸಂಪರ್ಕಿಸಿದ್ದಾರಾ? ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ