ಮುಖ್ಯಮಂತ್ರಿ ಓ,ಪನ್ನೀರ್ ಸೆಲ್ವಂ ನಂಬಿಕೆ ದ್ರೋಹಿ, ವಿಶ್ವಾಸಘಾತಕ ವ್ಯಕ್ತಿ. ನನ್ನ ಜೀವನದಲ್ಲಿ ಇಂತಹ ಸಾವಿರ ಪನ್ನೀರ್‌ಸೆಲ್ವಂರನ್ನು ನೋಡಿದ್ದೇನೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಗುಡುಗಿದ್ದಾರೆ.
ಪೋಯಿಸ್ ಗಾರ್ಡನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮ್ಮನ(ಜಯಲಲಿತಾ) ಸಾವಿನ ನಂತರ ಇಂತಹ ನಾಟಕೀಯ ಘಟನೆಗಳು ನಡೆಯುತ್ತವೆ ಎನ್ನುವ ನಿರೀಕ್ಷೆಯಿತ್ತು. ಅದರಂತೆ ಪಕ್ಷವನ್ನು ವಿಭಜಿಸುವ ಷಡ್ಯಂತ್ರಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.