ಏರ್ ಇಂಡಿಯಾದ ಹಿರಿಯ ಪೈಲಟ್ ಮನಸ್ಥಿತಿಯ ಏರುಪೇರಿನಿಂದಾಗಿ ಏ.28ರಂದು ದೆಹಲಿ-ಪ್ಯಾರಿಸ್ ಫ್ಲೈಟ್‌ನಲ್ಲಿ ಅಸುರಕ್ಷಿತ ಚಾಲನೆ ಮಾಡಿ 200 ಮಂದಿ ಪ್ರಯಾಣಿಕರ ಜೀವವನ್ನು ಅಪಾಯಕ್ಕೊಡಿದ ಘಟನೆ ಸಂಭವಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೈಲಟ್ ಅವರನ್ನು ವಜಾ ಮಾಡಲಾಗಿದ್ದು, ವಿಮಾನಯಾನ ನಿಯಂತ್ರಕ ಡಿಜಿಸಿಎ ಈ ಪ್ರಕರಣ ಕುರಿತು ತನಿಖೆ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ, ಪೈಲಟ್ ತೀವ್ರ ನಡವಳಿಕೆ ಸಮಸ್ಯೆಗಳಿಗೆ ಹಾಗೂ ಮನಸ್ಥಿತಿಯ ಏರುಪೇರಿಗೆ ಒಳಗಾಗುತ್ತಿದ್ದು, ಮುಂಚಿನ ಕೆಲವು ಸಂದರ್ಭಗಳಲ್ಲಿ ಕೂಡ ಪೈಲಟ್ ಕಳವಳದ ಲಕ್ಷಣಗಳನ್ನು ತೋರಿಸಿದ್ದರು.