Air India Plane crash: ಸುತ್ತಲೂ ಹೆಣಗಳ ರಾಶಿಯಿತ್ತು, ಬದುಕುಳಿದ ಏಕೈಕ ವ್ಯಕ್ತಿ ಬಿಚ್ಚಿಟ್ಟ ಭಯಾನಕ ಸತ್ಯ

Sampriya

ಗುರುವಾರ, 12 ಜೂನ್ 2025 (20:29 IST)
Photo Courtesy X
ನವದೆಹಲಿ: ಅಹಮಾದಾಬಾದ್‌ನಲ್ಲಿ ಇಂದು ನಡೆದ ವಿಮಾನ ದುರಂತದಲ್ಲಿ ವ್ಯಕ್ತಿಯೊಬ್ಬ ಅದೃಷ್ಟವಶಾತ್‌ ಪ್ರಾಣಪಾಯದಿಂದ ಪಾರಾಗಿದ್ದಾರೆ. 

40 ವರ್ಷ ವಯಸ್ಸಿನ ರಮೇಶ್ ವಿಶ್ವಶ್‌ಕುಮಾರ್ ಎಂಬ ವ್ಯಕ್ತಿ ವಿಮಾನದಿಂದ ಹಾರಿ, ಪ್ರಾಣವನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಎಚ್ಚರವಾದಗ ಹೆಣದ ರಾಶಿಗಳ ಮಧ್ಯೆ ಬಿದ್ದಿದ್ದೆ ಎಂದು ಭಯಾನಕತೆ ಬಿಚ್ಚಿಟ್ಟಿದ್ದಾರೆ. 

ಭಯದಿಂದ ರಮೇಶ್‌ ವಿಶ್ವಶ್‌ಕುಮಾರ್‌ ಓಡುತ್ತಾ ಬರುತ್ತಿರುವುದನ್ನು ನೋಡಿದ ಸ್ಥಳೀಯರು ವಿಚಾರಿಸಿದಾಗ, ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. 

ಗುರುವಾರ ಅಹಮದಾಬಾದ್‌ನಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಪತನಗೊಂಡಿತು. 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಅಹಮದಾಬಾದ್‌ನ ವೈದ್ಯಕೀಯ ಕಾಲೇಜಿನ ವಸತಿ ಆವರಣದ ಬಳಿ ನೆಲಕ್ಕೆ ಉರುಳಿತು. ವಿವಿಧ ಸುದ್ದಿ ಸಂಸ್ಥೆಗಳು ಮತ್ತು ಅಧಿಕಾರಿಗಳ ಆರಂಭಿಕ ವರದಿಗಳು ಭೀಕರ ಸಾವುನೋವುಗಳನ್ನು ದೃಢಪಡಿಸಿದವು, ಕೆಲವೇ ಕೆಲವು ಬದುಕುಳಿದಿವೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ