ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಉಚಿತಕೊಡುಗೆಗಳ ಭರವಸೆ ನೀಡುತ್ತವೆ. 2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳ ಭರವಸೆ ನೀಡಿತ್ತು. ಅದೇ ರೀತಿಯ ಪ್ರಯೋಗವನ್ನು ಪುನರಾವರ್ತಿಸಿರುವ ಅಖಿಲೇಶ್ ಯಾದವ್ ಸರ್ಕಾರ ಸ್ಮಾರ್ಟ್ ಫೋನ್‌ಗಳ ಉಚಿತ ವಿತರಣೆಯನ್ನು ಪ್ರಕಟಿಸಿವೆ. ಆದರೆ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳು ಈ ಯೋಜನೆಗೆ ಅರ್ಹರಲ್ಲ.
2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಸಂಪೂರ್ಣ ಬಹುಮತ ಸಾಧಿಸಿದ್ದು, ಅದರ ಮುಖ್ಯ ಚುನಾವಣೆ ಭರವಸೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆ ಕೂಡ ಸೇರಿತ್ತು. ಈಗ ಅಖಿಲೇಶ್ ಸರ್ಕಾರ ವಿತರಿಸಲು ನಿರ್ಧರಿಸಿರುವ ಸ್ಮಾರ್ಟ್‌ಫೋನ್‌ನಲ್ಲಿ ವಿಸ್ತೃತ್ ಆ್ಯಪ್ ಅಳವಡಿಸಲಾಗಿದ್ದು, ಆಡಿಯೊ ವಿಷುಯಲ್ ಮತ್ತು ಪಠ್ಯದ ಮೂಲಕ ರಾಜ್ಯಸರ್ಕಾರದ ಎಲ್ಲಾ ಮಾಹಿತಿಯನ್ನು ಜನರಿಗೆ ಮುಟ್ಟಿಸಲಾಗುತ್ತದೆ.
ಫಲಾನುಭವಿಗಳನ್ನು ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ಆಯ್ಕೆ ಮಾಡಲಾಗುತ್ತೆಂದು ಪ್ರಕಟಣೆ ತಿಳಿಸಿದೆ.
ಯಾವುದೇ ಭ್ರಷ್ಟಾಚಾರ ತಪ್ಪಿಸಲು ಸ್ಮಾರ್ಟ್‌ಪೋನ್ ನೇರವಾಗಿ ಫಲಾನುಭವಿಗಳಿಗೆ ಮುಟ್ಟುತ್ತದೆ. ಪ್ರೌಢಶಾಲೆ ತೇರ್ಗಡೆಯಾದ, 18 ವರ್ಷ ಪೂರೈಸಿದ ಹಾಗೂ ಕುಟುಂಬದ ಆದಾಯ ವರ್ಷಕ್ಕೆ 2 ಲಕ್ಷಕ್ಕಿಂತ ಕಡಿಮೆಯಿರುವವರು ಅರ್ಜಿ ಸಲ್ಲಿಸಬಹುದು ಎಂದು ಅದು ಹೇಳಿದೆ.