ಅಖಿಲೇಶ್- ರಾಹುಲ್ ಜಂಟಿ ರೋಡ್ ಶೋ

ಶನಿವಾರ, 4 ಫೆಬ್ರವರಿ 2017 (10:59 IST)
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶುಕ್ರವಾರ ಆಗ್ರಾದಲ್ಲಿ ಜಂಟಿ ರೋಡ್ ಶೋ ನಡೆಸಿ ತಮ್ಮ ಮೈತ್ರಿಕೂಟಕ್ಕಾಗಿ ಮತಯಾಚಿಸಿದ್ದಾರೆ. 

ಹಲವು ವರ್ಷಗಳಿಂದ ಅಖಿಲೇಶ್ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದ್ದಾರೆ. ಮತ್ತೀಗ ನಾವಿಬ್ಬರು ಸೇರಿ ಉತ್ತರ ಪ್ರದೇಶದ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತೇವೆ ಎಂದ ರಾಹುಲ್, ಬಿಜೆಪಿ ಮತ್ತು ಮಾಯಾವತಿ ನೇತೃತ್ವದ ಬಿಎಸ್‌ಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ ಅವರು ಉತ್ತರ ಪ್ರದೇಶದ ರಾಜಕಾರಣದಲ್ಲಿ ಬಿಎಸ್‌ಪಿ ಗೋಚರಿಸುತ್ತಿಲ್ಲವಾದ್ದರಿಂದ ಅದರ ಬಗ್ಗೆ ಕಮೆಂಟ್ ಮಾಡುವ ಅಗತ್ಯವಿಲ್ಲವೆಂದರು. 
 
ಕಳೆದವಾರ ಜಂಟಿಯಾಗಿ ಪತ್ರಿಕಾಗೋಷ್ಠಿ ನಡೆಸಿ ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್-ಅಖಿಲೇಶ್,  ಬಿಜೆಪಿ ಮತ್ತು ಬಿಎಸ್‌ಪಿಯ ಹೆಡೆಮುರಿ ಕಟ್ಟಲು ನಾವು ಒಂದಾಗಿದ್ದೇವೆ ಎಂದಿದ್ದರು. 
 
ರ‍್ಯಾಲಿಗಳಲ್ಲಿ ಪರಷ್ಪರ ಒಬ್ಬರನೊಬ್ಬರು ಹೊಗಳಿಕೊಳ್ಳುತ್ತಿರುವ ದೋಸ್ತಿಗಳು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸರ್ವ ಪ್ರಯತ್ನಗಳನ್ನು ನಡೆಸಿದ್ದಾರೆ. ರಾಹುಲ್ ತಮ್ಮ ಮೈತ್ರಿಯನ್ನು ಗಂಗಾ ಮತ್ತು ಯಮುನಾ ನದಿಗಳ ಸಂಗಮಕ್ಕೆ ಹೋಲಿಸಿದ್ದರೆ, ಅಖಿಲೇಶ್ ಕೈ ಮತ್ತು ಎಸ್‌ಪಿ ಸೈಕಲ್‌ನ ಎರಡು ಚಕ್ರಗಳಂತೆ ಎಂದಿದ್ದಾರೆ. 
 
ಉತ್ತರ ಪ್ರದೇಶದಲ್ಲಿ ಫೆಬ್ರವರಿ 11 ರಿಂದ ಮಾರ್ಚ್ 8ರವರೆಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ