ಮುಸ್ಲಿಮರು ಬಹುಪತ್ನಿಯರನ್ನು ಹೊಂದಬಹುದು: ಅಲಹಾಬಾದ್ ಕೋರ್ಟ್ ತೀರ್ಪು
ಫುರ್ಖಾನ್ ಎಂಬಾತನ ಕೇಸ್ ವಿಚಾರಣೆ ಸಂದರ್ಭದಲ್ಲಿ ಅಲಹಾಬಾದ್ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಇಂತಹದ್ದೊಂದು ತೀರ್ಪು ನೀಡಿದ್ದಾರೆ. ಈತನ ವಿರುದ್ಧ ಪತ್ನಿ 2020 ರಲ್ಲಿ ತನಗೆ ತಿಳಿಸದೇ ಇನ್ನೊಂದು ಮದುವೆಯಾಗಿರುವುದಾಗಿ ದೂರು ನೀಡಿದ್ದಳು.
ಮುಸ್ಲಿಮ್ ಪುರುಷರು ತಮ್ಮ ಎಲ್ಲಾ ಪತ್ನಿಯರನ್ನು ಸಮನಾಗಿ ನೋಡುವುದಿದ್ದರೆ ಒಂದಕ್ಕಿಂತ ಹೆಚ್ಚು ಮದುವೆಯಾಗಬಹುದು. ಕುರಾನ್ ನಲ್ಲಿ ಇದಕ್ಕೆ ಅವಕಾಶವಿದೆ. ಇದಕ್ಕೆ ಪ್ರಮಾಣೀಕೃತ ಕಾರಣ ಇರಬೇಕು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಪುರುಷರು ಇದನ್ನು ತಮ್ಮ ಸ್ವಾರ್ಥ ಸಾಧನೆಗೆ ದುರ್ಬಳಕೆ ಮಾಡುತ್ತಾರೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸಂವಿಧಾನದಲ್ಲಿ ಎಲ್ಲಾ ಧರ್ಮದ ಆಚರಣೆಗಳಿಗೆ ಅವಕಾಶ ನೀಡಲಾಗಿದೆ. ಅದರಂತೆ ಮುಸ್ಲಿಮರಿಗೆ ಈ ಅವಕಾಶ ನೀಡಬಹುದು. ಆದರೆ ಇದನ್ನು ದುರ್ಬಳಕೆ ಮಾಡಬಾರದು ಎಂದು ತಿಳಿಸಿದೆ.