India Pakistan:ಪಾಕಿಸ್ತಾನದ ಚೀನಾ ಏರ್ ಡಿಫೆನ್ಸ್ ವ್ಯವಸ್ಥೆಯನ್ನು ಜಾಮ್ ಮಾಡಿದ್ದ ಭಾರತ: ರೋಚಕ ಕಹಾನಿ

Krishnaveni K

ಗುರುವಾರ, 15 ಮೇ 2025 (11:27 IST)
ನವದೆಹಲಿ: ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಹಲ್ಗಾಮ್ ಉಗ್ರ ದಾಳಿಗೆ ಭಾರತೀಯ ಸೇನೆ ಪ್ರತೀಕಾರ ತೀರಿಸಿತ್ತು. ಈ ವೇಳೆ ಪಾಕಿಸ್ತಾನದ ಬಳಿಯಿದ್ದ ಚೀನಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂನ್ನು ಭಾರತ ಜಾಮ್ ಮಾಡಿತ್ತು ಎಂಬ ಅಂಶವನ್ನು ಈಗ ಕೇಂದ್ರ ಸರ್ಕಾರವೇ ಹೊರಹಾಕಿದೆ.

ಆಪರೇಷನ್ ಸಿಂಧೂರ್ ನಡೆಸಲು ಭಾರತ ಪಾಕಿಸ್ತಾನದ ಗಡಿಯೊಳಗೇ ಹೋಗಿರಲಿಲ್ಲ. ಇಲ್ಲಿಂದಲೇ ಕ್ಷಿಪಣಿ, ರಾಫೆಲ್ ಯುದ್ಧ ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿತ್ತು. ಹಾಗಿದ್ದರೂ ಪಾಕಿಸ್ತಾನಕ್ಕೆ ಇದನ್ನು ತಡೆಯಲು ಸಾಧ್ಯವಾಗಲಿಲ್ಲ.

ಅಸಲಿಗೆ ಪಾಕಿಸ್ತಾನದ ಬಳಿ ಚೀನಾ ನಿರ್ಮಿತ ಎಚ್ ಕ್ಯೂ-9 ಏರ್ ಡಿಫೆನ್ಸ್ ಸಿಸ್ಟಂ ಇತ್ತು. ಇದು 300 ಕಿ.ಮೀ. ದೂರದಿಂದಲೇ ಬರುವ ಕ್ಷಿಪಣಿ ದಾಳಿಗಳನ್ನು ತಡೆಯುವ ಸಾಮರ್ಥ್ಯ ಹೊಂದಿತ್ತು. ಹಾಗಿದ್ದರೂ ಭಾರತದ ದಾಳಿ ತಡೆಯಲು ಇದು ವಿಫಲವಾಗಿದ್ದು ಹೇಗೆ ಎಂಬುದೇ ರೋಚಕ ಕಹಾನಿಯಾಗಿದೆ.

ಆಪರೇಷನ್ ಸಿಂಧೂರ್ ನಡೆಸುವ ಮೊದಲು ಭಾರತ ಈ ಚೀನಾ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂನ್ನು ಬೈಪಾಸ್ ಮಾಡಿ ಜಾಮ್ ಮಾಡಿತ್ತು. ನಂತರ ಪಾಕ್ ಗಡಿಯೊಳಗೆ ಹೋಗದೇ ಭಾರತದೊಳಗಿನಿಂದಲೇ ದಾಳಿ ನಡೆಸಲಾಗಿತ್ತು. ಕೇವಲ 23 ನಿಮಿಷದಲ್ಲಿ ಈ ಕಾರ್ಯಾಚರಣೆ ಮುಗಿಸಿತ್ತು ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ