ನೋಟು ನಿಷೇಧ; ಹಿಂಪಡೆಯುವ ಪ್ರಶ್ನೆ ಇಲ್ಲ ಎಂದ ಜೇಟ್ಲಿ

ಶುಕ್ರವಾರ, 18 ನವೆಂಬರ್ 2016 (17:26 IST)
ನೋಟು ನಿಷೇಧದ ನಿರ್ಧಾರವನ್ನು ಹಿಂಪಡೆಯುವ ಸಾಧ್ಯತೆಯನ್ನು ತಳ್ಳಿ ಹಾಕಿದ ವಿತ್ತ ಸಚಿವ ಅರುಣ್ ಜೇಟ್ಲಿ, ಇದು ಬಹಳ ಚೆನ್ನಾಗಿ ಯೋಜಿಸಿ ಕೈಗೊಂಡ ನಿರ್ಧಾರ ಎಂದಿದ್ದಾರೆ. 

 
ನೋಟು ನಿಷೇಧ ಹಿಂಪಡೆಯಿರಿ ಎಂದು ಆಗ್ರಹಿಸುತ್ತಿರುವ ಪ್ರತಿಪಕ್ಷಳಿಗೆ ಉತ್ತರಿಸಿದ ಅವರು, ಇದನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
 
ವಾರಗಳ 7 ದಿನ ಕೋಟಿಗಟ್ಟಲೆ ಗ್ರಾಹಕರ ಜತೆ  ಬ್ಯಾಂಕುಗಳು ಅಧಿಕಾರಿಗಳು ಮತ್ತು ಅವರ ಉದ್ಯೋಗಿಗಳ ಕಾರ್ಯ ವ್ಯವಹರಿಸಬೇಕಾಗುತ್ತಿದೆ. ಅವರ ಕಾರ್ಯ ಶ್ಲಾಘನೀಯವಾದುದು ಎಂದಿದ್ದಾರೆ ಜೇಟ್ಲಿ. 
 
500 ಮತ್ತು 100 ರೂಪಾಯಿ ನಿಷೇಧದ ವಿರುದ್ಧ ಪ್ರತಿಪಕ್ಷಗಳು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕೋಲಾಹಲವನ್ನು ಎಬ್ಬಿಸುತ್ತಿದ್ದು, ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ