ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕ್ರಿಕೆಟಿಗ ಧೋನಿಯನ್ನು ಭೇಟಿ ಮಾಡಿದ್ದೇಕೆ?

ಸೋಮವಾರ, 6 ಆಗಸ್ಟ್ 2018 (09:59 IST)
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಂ ಇಂಡಿಯಾ ಕ್ರಿಕೆಟಿಗ ಧೋನಿಯವರನ್ನು ಅವರ ನಿವಾಸಕ್ಕೆ ತೆರಳಿ ಭೇಟಿಯಾಗಿ ಬಂದಿದ್ದಾರೆ.
 

ಅಷ್ಟಕ್ಕೂ ಅಮಿತ್ ಶಾ ಧೋನಿಯನ್ನು ಯಾಕೆ ಭೇಟಿಯಾದರು ಅಂತೀರಾ? ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳ ವಿವರ ನೀಡುವ ‘ಸಂಪರ್ಕ್ ಸೆ ಸಮರ್ಥನ್’ ಅಭಿಯಾನದ ಅಂಗವಾಗಿ ಅಮಿತ್ ಶಾ ಧೋನಿಯನ್ನು ಭೇಟಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಶಾ ಜತೆಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಕೆಲವು ಬಿಜೆಪಿ ನಾಯಕರೂ ಇದ್ದರು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುವ ಕಿರು ಹೊತ್ತಗೆಯನ್ನೂ ಇದೇ ವೇಳೆ ಅಮಿತ್ ಶಾ ಧೋನಿಗೆ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ