ನಮ್ಮದೇ ತಪ್ಪಿನಿಂದ ಬಿಜೆಪಿ ಸೋತಿತು: ಬಿಎಸ್ ವೈ
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ರಾಜ್ಯ ಸರ್ಕಾರ ಬಹು ಸಂಖ್ಯಾತ ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿತು ಎಂದು ಅವರು ಕಳೆದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಅಷ್ಟೇ ಅಲ್ಲದೆ, ಈಗ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದಲ್ಲಿ ಎಚ್ ಡಿ ರೇವಣ್ಣರದ್ದೇ ಕಾರುಬಾರು. ಎಲ್ಲಾ ಇಲಾಖೆಗಳಲ್ಲೂ ಅವರೇ ಕೈಯಾಡಿಸುತ್ತಿದ್ದಾರೆ ಎಂದು ಬಿಎಸ್ ವೈ ಆರೋಪಿಸಿದ್ದಾರೆ.