ಭಾರತೀಯರನ್ನು ಕರೆತರಲು ಹೊರಟ ವಿಮಾನ

ಮಂಗಳವಾರ, 22 ಫೆಬ್ರವರಿ 2022 (11:41 IST)
ನವದೆಹಲಿ : ಉಕ್ರೇನ್ ಮೇಲೆ ರಷ್ಯಾದ ಸಂಭವನೀಯ ಆಕ್ರಮಣದ ಭೀತಿ ಹೆಚ್ಚಿದೆ.
 
ಹೀಗಾಗಿ ಆತಂಕವಿರುವ ಪ್ರದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಟಾಟಾ ಒಡೆತನದ ಏರ್ ಇಂಡಿಯಾ ಇಂದು ರಾತ್ರಿ ಉಕ್ರೇನ್ ತಲುಪಲಿದೆ.

ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸರ್ಕಾರ ಮುಂದಾಗಿದೆ. ಉಕ್ರೇನ್ನಲ್ಲಿ ನೆಲೆಸಿರುವ ಭಾರತೀಯರು ಸುರಕ್ಷಿತವಾಗಿ ಹಿಂದಿರುಗಲು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.

ಏರ್ ಇಂಡಿಯಾದ ಎಐ-1946 ಮೊದಲ ವಿಶೇಷ ವಿಮಾನದಲ್ಲಿ ಭಾರತೀಯ ಪ್ರಜೆಗಳು ಇಂದು ರಾತ್ರಿ ತವರು ದೇಶಕ್ಕೆ ಮರಳಲಿದ್ದಾರೆ ಎಂದು ಏರ್ಲೈನ್ ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಫೆರ್ರಿ ವಿಮಾನವು ಸೋಮವಾರ ಉಕ್ರೇನ್ನಿಂದ ಭಾರತೀಯರನ್ನು ವಾಪಸ್ ಕರೆತಂದಿತ್ತು.

ಏರ್ ಇಂಡಿಯಾದ ಮೂರು ವಿಮಾನಗಳು ಫೆ.22, 24 ಮತ್ತು 26ರಂದು ಭಾರತ ಮತ್ತು ಉಕ್ರೇನ್ ನಡುವೆ ಕಾರ್ಯಾಚರಣೆ ನಡೆಸಲಿದೆ ಎಂದು ತಿಳಿಸಲಾಗಿದೆ. ಉಕ್ರೇನ್ಗೆ ವಿಶೇಷ ಕಾರ್ಯಾಚರಣೆಯ ಭಾಗವಾಗಿ ದೆಹಲಿಯಿಂದ ಬೋಯಿಂಗ್ ಡ್ರೀಮ್ಲೈನರ್ ಎಐ-1947 ವಿಮಾನವು ಟೇಕ್ ಆಫ್ ಆಗಿದೆ. ಇದು 200ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ