ದೇಶಕ್ಕೆ ಮರಳಿ : ಬೈಡೆನ್

ಶನಿವಾರ, 12 ಫೆಬ್ರವರಿ 2022 (08:10 IST)
ನ್ಯೂಯಾರ್ಕ್ : ರಷ್ಯಾ-ಉಕ್ರೇನ್ ನಡುವೆ ಯುದ್ಧದ ಭೀತಿ ಹೆಚ್ಚುತ್ತಿರುವ ನಡುವೆಯೇ, ಉಕ್ರೇನ್ ದೇಶದಲ್ಲಿರುವ ಎಲ್ಲ ಅಮೆರಿಕನ್ನರೂ ಕೂಡಲೇ ಸ್ವದೇಶಕ್ಕೆ ಮರಳಬೇಕೆಂದು ಅಮೆರಿಕ ಸೂಚಿಸಿದೆ.
 
ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣಕ್ಕೆ ಮುಂದಾದರೆ ಅಮೆರಿಕ ಸೇನೆ ರಕ್ಷಣಾ ಕಾರ್ಯಕ್ಕೆ ಧಾವಿಸುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡೆನ್  ಸುದ್ದಿಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ಈ ಸೂಚನೆ ನೀಡಿದ್ದಾರೆ. ‘ವಿಶ್ವದ ಅತಿದೊಡ್ಡ ಸೇನೆ ಹೊಂದಿರುವ ದೇಶದ ಜೊತೆಗಿನ ಯುದ್ಧದ ಸಾಧ್ಯತೆ ಇರುವ ಸನ್ನಿವೇಶ. ಯಾವುದೇ ಸಂದರ್ಭದಲ್ಲಿ ಯುದ್ಧ ಆರಂಭವಾಗಬಹುದು’ ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ರಷ್ಯಾ-ಉಕ್ರೇನ್ ಗಡಿಯಲ್ಲಿ ಉದ್ವಿಗ್ನ ಮಾತಾವರಣ ನಿರ್ಮಾಣವಾಗಿದ್ದು, ರಷ್ಯಾ 1.30 ಲಕ್ಷಕ್ಕೂ ಹೆಚ್ಚು ಸೈನಿಕರು, ಕ್ಷಿಪಣಿಗಳು ಮತ್ತಿತರ ಯುದ್ಧ ಸಾಮಗ್ರಿಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ ರಷ್ಯಾ ಇದನ್ನು ನಿರಾಕರಿಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ