ಮೋದಿಗೆ ರುದ್ರಾಕ್ಷಿ ಮಾಲೆ ನೀಡಿದ ಅನುಪಮ್ ಖೇರ್
ಮೋದಿ ಅವರನ್ನು ಭೇಟಿ ಮಾಡಿದ ಅನುಪಮ್ ಖೇರ್ ಅವರು ಕೆಲವೊಂದು ಫೋಟೋಗಳನ್ನು ಅವರೊಂದಿಗೆ ಕ್ಲಿಕ್ಕಿಸಿಕೊಂಡು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಫೋಟೋ ಜೊತೆಗೆ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮನ್ನು ಭೇಟಿಯಾಗಿ ತುಂಬಾ ಸಂತೋಷವಾಯಿತು. ದೇಶದ ಜನತೆಗಾಗಿ ನೀವು ಹಗಲಿರುಳು ಪಡುತ್ತಿರುವ ಶ್ರಮ ಸ್ಪೂರ್ತಿದಾಯಕವಾಗಿದೆ.
ನಿಮ್ಮನ್ನು ರಕ್ಷಿಸಲು ನನ್ನ ತಾಯಿ ಕಳುಹಿಸಿದ ರುದ್ರಾಕ್ಷಿ ಮಾಲೆಯನ್ನು ನೀವು ಗೌರವದಿಂದ ಸ್ವೀಕರಿಸಿದ್ದನ್ನು ನಾನು ಎಂದಿಗೂ ನೆನಪಿಸಿಕೊಳ್ಳುತ್ತೇನೆ. ಜೈ ಹೋ. ಜೈ ಹಿಂದ್ ಎಂದು ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.