ಹಿಂದೂ ಎಂದು ಹೇಳಿಕೊಂಡು ತಿರುಗಾಡೋರೆಲ್ಲಾ ಹಿಂಸಾಚಾರವನ್ನೇ ಮಾಡ್ತಿದ್ದಾರೆ: ರಾಹುಲ್ ಗಾಂಧಿ

Sampriya

ಸೋಮವಾರ, 1 ಜುಲೈ 2024 (15:50 IST)
Photo Courtesy X
ನವದೆಹಲಿ:  ಸೋಮವಾರ ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ  ರಾಹುಲ್ ಗಾಂಧಿ  ಅವರು 'ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಧಾನಿ ಮೋದಿ ಅವರು ಹಿಂದೂ ವಿಚಾರವನ್ನು ಮುಂದಿಟ್ಟುಕೊಂಡು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ತುಂಬಾ ಗಂಭೀರವಾಗಿದೆ  ಎಂದು ಹೇಳಿದರು.

ಲೋಕಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, "ಹಿಂದೂ ಧರ್ಮವು ಭಯ, ದ್ವೇಷ ಮತ್ತು ಸುಳ್ಳು ಹಬ್ಬಿಸುವುದಲ್ಲ" ಎಂದು ಹೇಳಿದರು.

ರಾಹುಲ್ ಗಾಂಧಿಯವರು ಇಸ್ಲಾಂ ಸಿಖ್ ಧರ್ಮವನ್ನು ಉಲ್ಲೇಖಿಸಿ ಒಬ್ಬರು ನಿರ್ಭೀತರಾಗಿರಬೇಕೆಂದು ಒತ್ತಿ ಹೇಳಿದರು. "ನೀವು ಶಿವನ ಚಿತ್ರವನ್ನು ನೋಡಿದರೆ, ಹಿಂದೂಗಳು ಎಂದಿಗೂ ಭಯ, ದ್ವೇಷವನ್ನು ಹರಡಲು ಸಾಧ್ಯವಿಲ್ಲ. ಆದರೆ ಬಿಜೆಪಿ ಭಯ, ದ್ವೇಷವನ್ನು 24X7 ಕಾಲ ಹರಡುತ್ತದೆ" ಎಂದು ಗಾಂಧಿಯವರು ಶಿವನ ಚಿತ್ರವನ್ನು ಕೈಯಲ್ಲಿ ಹಿಡಿದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ