ಬಿ.ಎಸ್ ಧನೋವಾ ಅವರು ಭಾರತೀಯ ವಾಯುಪಡೆಯ (ಐಎಎಫ್) ಪ್ರತಿಯೊಬ್ಬ ಅಧಿಕಾರಿಗಳಿಗೂ ವೈಯಕ್ತಿಕ ಪತ್ರ ಬರೆಯುವ ಮೂಲಕ ಸೂಚನೆ ನೀಡಿದ್ದಾರೆ. ಪ್ರಸ್ತಕ್ತ ಸನ್ನಿವೇಶದಲ್ಲಿ ಉಪಖಂಡದಲ್ಲಿ ಸಾಂಪ್ರದಾಯಿಕ ಬೆದರಿಕೆ ಬರುತ್ತಿದೆ. ಈ ಹಿನ್ನಲೆಯಲ್ಲಿ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಾರ್ಯಾಚರಣೆಗೆ ಯಾವುದೇ ಕ್ಷಣದಲ್ಲಾದರು ಸಜ್ಜಾಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಗಮನ ಹರಿಸಲು ತರಬೇತಿಯ ಅಗತ್ಯವೂ ಇದೆ.
ಸಾಂಪ್ರದಾಯಿಕ ಬಾಹ್ಯ ಬೆದರಿಕೆಗಳ ಮೂಲಕ ಪಾಕಿಸ್ತಾನ ಯುದ್ಧಕ್ಕೆ ತಯಾರಾಗುತ್ತಿದೆ. ಇದರ ಪರಿಣಾಮದಿಂದಾಗಿಯೇ ಸೇನಾ ನೆಲೆಗಳ ಮೇಲೆ ಉಗ್ರರ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಹಿಂಸಾಚಾರ ಹೆಚ್ಚಾಗತೊಡಗಿದೆ. ಈ ಹಿನ್ನಲೆಯಲ್ಲಿ ಯಾವುದೇ ಸಮಯದಲ್ಲೂ ಬೇಕಾದರೂ ಕಾರ್ಯಾಚರಣೆ ನಡೆಸಬೇಕಾದ ಅಗತ್ಯತೆ ಎದುರಾಗಬಹುದು ಎಂದು ವಾಯುಪಡೆಯ ಸುಮಾರು 12,000 ಅಧಿಕಾರಿಗಳಿಗೆ ತಿಳಿಸಿದ್ದಾರೆ.