ಗುಜರಾತ್ ಗಾಂಧಿನಗರದ ಅಪೋಲೊ ಆಸ್ಪತ್ರೆಯ ವೈದ್ಯರೊಬ್ಬರನ್ನು ಐಸಿಯುನಲ್ಲಿದ್ದ ಡೆಂಗ್ಯೂ ರೋಗಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.
21 ವರ್ಷದ ಮಹಿಳೆಯನ್ನು ಶನಿವಾರ ಆಸ್ಪತ್ರೆಗೆ ಸೇರಿಸಲಾಗಿದ್ದು, 2 ದಿನಗಳಲ್ಲಿ ವೈದ್ಯ ಮತ್ತು ಆಸ್ಪತ್ರೆ ನೌಕರ, ವಿಸಿಟರ್‌ಗಳಿಗೆ ಪ್ರವೇಶ ನಿರ್ಬಂಧವಿರುವ ಆಸ್ಪತ್ರೆಯ ವಿಭಾಗದಲ್ಲಿ ರೇಪ್ ಮಾಡಿದ್ದಾರೆಂದು ಆರೋಪಿಸಲಾಗಿದೆ.
ವೈದ್ಯ ರಮೇಶ್ ಚೌಹಾನ್ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವಾಗ ಅವಳ ಮೇಲೆ ರೇಪ್ ಮಾಡಿದ್ದರು. ರೇಪ್ ಆಗುವ ಮುಂಚೆ ಕೆಲವು ಔಷಧಿ ನೀಡಿದ್ದರಿಂದ ತನಗೆ ಪ್ರತಿರೋಧ ತೋರಲಾಗಲಿಲ್ಲ ಎಂದು ಅವಳು ಹೇಳಿದ್ದಾಳೆ.
ಅಪರಾಧದಲ್ಲಿ ಭಾಗಿಯಾಗಿದ್ದ ವಾರ್ಡ್ ಬಾಯ್‌ನನ್ನು ಕೂಡ ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಯುವತಿ ಮೇಲೆ ರೇಪ್ ಮಾಡಿರುವುದು ದೃಢಪಟ್ಟಿದೆ. ಮಹಿಳೆಗೆ ತುಂಬಾ ಔಷಧಿ ಕುಡಿಸಿದ್ದರಿಂದ ನಿಶ್ಯಕ್ತಳಾಗಿದ್ದು ನಿನ್ನೆ ಅವಳು ಏನಾಯಿತೆಂಬ ವಿವರವನ್ನು ತನ್ನ ಚಿಕ್ಕಪ್ಪನಿಗೆ ಬರೆದಿರುವ ಪತ್ರದಲ್ಲಿ ತಿಳಿಸಲು ಸಾಧ್ಯವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ಡೌನ್‍ಲೋಡ್ ಮಾಡಿಕೊಳ್ಳಿ