ಹೊಸ ನೇಮಕಾತಿ ಸ್ಥಗಿತಗೊಳಿಸಿದ ಆ್ಯಪಲ್

ಗುರುವಾರ, 16 ಮಾರ್ಚ್ 2023 (08:59 IST)
ನವದೆಹಲಿ : ಆ್ಯಪಲ್ ಕಂಪನಿಯು ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ತನ್ನ ಕಂಪನಿಯ ಕಾರ್ಪೊರೇಟ್ ವಿಭಾಗದ ಉದ್ಯೋಗಿಗಳ ಬೋನಸ್ಗಳನ್ನು ವಿಳಂಬಗೊಳಿಸಲು ನಿರ್ಧರಿಸಿದೆ ಹಾಗೂ ಹಲವು ಉದ್ಯೋಗಿಗಳ ಬೋನಸ್ ಕೂಡಾ ಕಡಿಮೆಗೊಳಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಈ ವರದಿಗಳು ನಿಜವಾದಲ್ಲಿ ಉದ್ಯೋಗಿಗಳ ಒಂದು ವರ್ಗಕ್ಕೆ ಮುಂದಿನ ತಿಂಗಳು ಬಡ್ತಿ ದೊರೆಯುವುದಿಲ್ಲ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಕಂಪನಿಯು ವರ್ಷಕ್ಕೆ ಎರಡು ಬಾರಿ (ಎಪ್ರಿಲ್ ಮತ್ತು ಅಕ್ಟೋಬರ್) ತನ್ನ ಉದ್ಯೋಗಿಗಳಿಗೆ ಬೋನಸ್ ನೀಡುತ್ತದೆ.

ಬಡ್ತಿ ಹಾಗು ಬೋನಸ್ ಹೊರತಾಗಿ ಆ್ಯಪಲ್ ಕಂಪನಿಯು ನೇಮಕಾತಿಯನ್ನು ಸ್ಥಗಿತಗೊಳಿಸುವ ನಿರೀಕ್ಷೆಯಿದೆ. ಇದಕ್ಕೂ ಮೊದಲು 2020ರಲ್ಲಿ ಗೂಗಲ್, ಮೆಟಾ ಹಾಗು ಇನ್ನಿತರೆ ಟೆಕ್ ಕಂಪನಿಗಳು ಲೆಕ್ಕಕ್ಕಿಂತ ಜಾಸ್ತಿ ಉದ್ಯೋಗಿಗಳ ನೇಮಕಾತಿಯನ್ನು ಮಾಡಿಕೊಂಡು ಪ್ರಸ್ತುತ ಸಾವಿರಾರು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾಗೊಳಿಸುತ್ತಿದೆ. 

ಆ್ಯಪಲ್ ಕಂಪನಿಯ ಹೆಚ್ಆರ್ ತಂಡವು ಉದ್ಯೋಗಿಗಳ ಹಾಜರಾತಿಯನ್ನು ಸೂಕ್ಷ್ಮರೀತಿಯಲ್ಲಿ ಗಮನಿಸುತ್ತಿದೆ. ಈ ಕಂಪನಿಯು ಮನೆಯಿಂದ ಕೆಲಸ ಮಾಡುವುದನ್ನು ಕೊನೆಗೊಳಿಸಿ ಉದ್ಯೋಗಿಗಳು ವಾರಕ್ಕೆ ಮೂರು ಸಲ ಕಚೇರಿಗೆ ಬಂದು ಕೆಲಸ ಮಾಡುವಂತೆ ಹೇಳಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ