ಪೆಗಾಸಸ್ ಗೂಢಚರ್ಯ ಪ್ರಕರಣದ ತನಿಖೆಗೆ ತಜ್ಞರ ನೇಮಕ

ಶುಕ್ರವಾರ, 12 ನವೆಂಬರ್ 2021 (15:58 IST)
ಪೆಗಾಸಸ್ ಗೂಢಚರ್ಯ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ತಜ್ಞರ ಸಮಿತಿಗೆ ಅಗತ್ಯ ಸಹಕಾರ ನೀಡುವುದಾಗಿ ಕೇಂದ್ರ ಸರಕಾರ ತಿಳಿಸಿದೆ.
ತನಿಖೆ ನಡೆಸಲು ಉತ್ತಮ ಮೂಲ ಸೌಕರ್ಯ, ಪ್ರಯೋಗಾಲಯ ಸವಲತ್ತು ಮತ್ತು ಮಾಹಿತಿ ಅನುಕೂಲ ಬೇಕಾಗುತ್ತದೆ. ಅದನ್ನು ತಜ್ಞರ ಸಮಿತಿಗೆ ನಾವು ಒದಗಿಸುತ್ತೇವೆ ಎಂದು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಭರವಸೆ ನೀಡಿದ್ದಾರೆ. ‘ಸಾಮಾಜಿಕ ಮಾಧ್ಯಮ ತಾಣಗಳು ಜನರಿಗೆ ಹೇರಳವಾದ ಅಭಿವ್ಯಕ್ತಿ ಅವಕಾಶಗಳನ್ನು ಒದಗಿಸಿವೆ. ಸರಕಾರವೂ ಮುಕ್ತ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸಿದೆ. ಆದರೆ, ಇರುವ ಮುಕ್ತತೆ ದುರ್ಬಳಕೆಯಾಗದಂತೆ ತಡೆಯುವ ಜವಾಬ್ದಾರಿ ಜನರ ಮೇಲಿದೆ. ಕೆಲವರು ತಂತ್ರಜ್ಞಾನದ ಈ ಅನುಕೂಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಯೋಚನೆಯ ಪಥದ ಮೇಲೆ ಒತ್ತಡ ಸೃಷ್ಟಿಯಾಗುತ್ತಿದೆ. ಇದನ್ನು ತಹಬಂದಿಗೆ ತರಲು ಕಾಯಿದೆಗಳು ಅನಿವಾರ್ಯ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ..

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ