ಫ್ರಾನ್ಸ್ನ 5 ಸಚಿವರ ಫೋನ್ಗಳಲ್ಲಿ ಪೆಗಾಸಸ್ ಸ್ಪೈವೇರ್ ಪತ್ತೆ

ಭಾನುವಾರ, 26 ಸೆಪ್ಟಂಬರ್ 2021 (11:11 IST)
ಪ್ಯಾರಿಸ್, ಸೆ.26 : ಫ್ರಾನ್ಸ್ನ 5 ಸಚಿವರು ಹಾಗೂ ಅಧ್ಯಕ್ಷ ಮಾಕ್ರನ್ ಅವರ ರಾಜತಾಂತ್ರಿಕ ಸಲಹೆಗಾರರ ಫೋನ್ಗಳನ್ನು ಪೆಗಾಸಸ್ ಸ್ಪೈವೇರ್ ಬಳಸಿ ಹ್ಯಾಕ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಫ್ರಾನ್ಸ್ನ ವೆಬ್ಸೈಟ್ನ ವರದಿಯನ್ನು ಉಲ್ಲೇಖಿಸಿ ಎಎಫ್ಪಿ ಶುಕ್ರವಾರ ವರದಿ ಮಾಡಿದೆ.

ಫ್ರಾನ್ಸ್ನ ಭದ್ರತಾ ಸಂಸ್ಥೆ ಫೋನ್ಗಳನ್ನು ಪರಿಶೀಲನೆ ನಡೆಸುತ್ತಿದ್ದಾಗ ಈ ಸಾಫ್ಟ್ವೇರ್ ಪತ್ತೆಯಾಗಿದೆ. 2019ರಿಂದ 2020ರ ನಡುವೆ ಪೆಗಾಸಸ್ ಸ್ಪೈವೇರ್ ಅನ್ನು ಫೋನ್ಗೆ ಸೇರಿಸಿರುವ ಸಾಧ್ಯತೆಯಿದೆ ಎಂದು 'ಮೀಡಿಯಾಪಾರ್ಟ್ ವೆಬ್ಸೈಟ್ ವರದಿ ಮಾಡಿದೆ. ಇಸ್ರೇಲ್ನ ಎನ್ಎಸ್ಒ ಸಮೂಹಸಂಸ್ಥೆ ತಯಾರಿಸಿರುವ ಪೆಗಾಸಸ್ ಸ್ಪೈವೇರ್ ಅನ್ನು ಫೋನ್ಗಳ ಕ್ಯಾಮೆರಾ ಅಥವಾ ಮೈಕ್ರೋಫೋನ್ನಲ್ಲಿ ಅಳವಡಿಸಿ ಫೋನ್ನ ಮಾಹಿತಿ, ದಾಖಲೆ ಸಂಗ್ರಹಿಸಲಾಗುತ್ತದೆ. ಈ ವಿಧಾನ ಬಳಸಿ ವಿಶ್ವದಾದ್ಯಂತ ಸುಮಾರು 50,000 ಪ್ರಮುಖ ವ್ಯಕ್ತಿಗಳ ಮಾಹಿತಿಯನ್ನು ಕದಿಯಲಾಗಿದೆ ಎಂದು ಮಾಧ್ಯಮಗಳು ಜುಲೈಯಲ್ಲಿ ವರದಿ ಮಾಡಿದ್ದವು.
ಫ್ರಾನ್ಸ್ನ ಶಿಕ್ಷಣ ಸಚಿವ ಜೀನ್ಮೈಕೆಲ್ ಬ್ಲಾಂಕರ್, ಪ್ರಾದೇಶಿಕ ಬುಡಕಟ್ಟು ಸಚಿವ ಜಾಕ್ವೆಲಿನ್ ಗೌರಾಲ್ಟ್, ಕೃಷಿ ಸಚಿವ ಜೂಲಿಯನ್ ಡೆನಾರ್ಮಂಡಿ, ವಸತಿ ಸಚಿವ ಇಮ್ಯಾನುವೆಲ್ ವಾರ್ಗನ್, ಸಾಗರೋತ್ತರ ಪ್ರಾಂತ್ಯಗಳ ಸಚಿವ ಸೆಬಾಸ್ಟಿಯನ್ ಲೆಕಾರ್ನು ಫೋನ್ಗಳಲ್ಲಿ ಸ್ಪೈವೇರ್ ಪತ್ತೆಯಾಗಿದೆ ಎಂಬ ವರದಿಯನ್ನು ಫ್ರಾನ್ಸ್ನ 2 ಉನ್ನತ ಮೂಲಗಳೂ ದೃಢಪಡಿಸಿವೆ ಎಂದು ಎಎಫ್ಪಿ ವರದಿ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ