ವಿಶ್ವವಿದ್ಯಾಲಯಗಳ ತಿದ್ದುಪಡಿ ಮಸೂದೆಗೆ ಅಂಗೀಕಾರ?

ಸೋಮವಾರ, 8 ಆಗಸ್ಟ್ 2022 (15:06 IST)
ಕೇಂದ್ರ ಸರ್ಕಾರವು ಸೋಮವಾರ ರಾಜ್ಯಸಭೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ,
 
2022 ಅನ್ನು ಪರಿಗಣನೆ ಮತ್ತು ಅಂಗೀಕಾರ ಪಡೆಯಲು ಮಂಡನೆ ನಡೆಸಲಿದೆ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೇಂದ್ರೀಯ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ, 2022 ಅನ್ನು ಲೋಕಸಭೆಯಲ್ಲಿ  ಅಂಗೀಕಾರಕ್ಕೆ ಪ್ರಸ್ತಾಪಿಸಲಿದ್ದಾರೆ.

ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯಿದೆ, 2009 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ಮತ್ತು ಪರಿಗಣನೆಗೆ ತೆಗೆದುಕೊಂಡು ಅಂಗೀಕರಿಸುವ ಕುರಿತು ಮೂಲಗಳು ಮಾಹಿತಿ ನೀಡಿವೆ.

ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನೆ (ತಿದ್ದುಪಡಿ) ಕಾಯಿದೆಯಡಿ ಸ್ಥಾಪಿಸಲಾದ ಸಂಸ್ಥೆಗಳ ಕೌನ್ಸಿಲ್ನ ಸದಸ್ಯರನ್ನಾಗಿ ಸದನದಿಂದ ಓರ್ವ ಸದಸ್ಯರನ್ನು ಅಧ್ಯಕ್ಷರು ನಿರ್ದೇಶಿಸಿದಂತೆ ಆಯ್ಕೆ ಮಾಡಲಾಗುತ್ತದೆ. ಇದರಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪ್ರಸ್ತಾವನೆಯನ್ನು ಮಂಡಿಸಲಿದ್ದಾರೆ.

ಭುವನೇಶ್ವರ್ ಕಲಿತಾ ಮತ್ತು ಶಕ್ತಿಸಿಂಗ್ ಗೋಹಿಲ್ ಅವರು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (2022-23) `ಮತದಾನ ಮಾಡಿದ ಅನುದಾನ ಮತ್ತು ಚಾರ್ಜ್ಡ್ ಅಪ್ರೋಪ್ರಿಯೇಷನ್ಗಳ (2019-20) ಮೇಲೆ ಹೆಚ್ಚುವರಿಗಳು' ಕುರಿತು 53 ನೇ ವರದಿಯನ್ನು ನೀಡಲಿದ್ದಾರೆ.

ಕಲ್ಲಿದ್ದಲು, ಗಣಿ ಮತ್ತು ಉಕ್ಕಿನ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ 19ನೇ ವರದಿಯಲ್ಲಿನ ಕಲ್ಲಿದ್ದಲು ಸಂರಕ್ಷಣೆ ಮತ್ತು ದೇಶಾದ್ಯಂತ ಕಲ್ಲಿದ್ದಲು ಸಾಗಣೆಗೆ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ಒಳಗೊಂಡಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಗತಿ ಕುರಿತು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ನೀಡಲಿದ್ದಾರೆ.

 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಸಂಶೋಧನಾ ಇಲಾಖೆಗಳಿಗೆ ಸಂಬಂಧಿಸಿದ ಅನುದಾನದ ಬೇಡಿಕೆಗಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯ ವರದಿಗಳಲ್ಲಿರುವ ಶಿಫಾರಸುಗಳ ಅನುಷ್ಠಾನದ ಸ್ಥಿತಿಯ ಕುರಿತು ಮಾಂಡವಿಯಾ ಹೇಳಿಕೆ ನೀಡಲಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ