ಹೈದರಾಬಾದ್ : ಯುವತಿಯೊಬ್ಬಳ ಮೇಲೆ ಅರಬ್ ನ ಶೇಖ್ ಅತ್ಯಾಚಾರ ಎಸಗಿದ ಘಟನೆ ಹೈದರಾಬಾದ್ ನಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಹೈದರಾಬಾದ್ ನ ಹಳೇ ಬಸ್ತಿಯಲ್ಲಿ ಯುವತಿಯನ್ನು ಏಜೆಂಟ್ ಅರಬ್ ನ ಶೇಖ್ ಗೆ ಮಾರಿದ ಹಿನ್ನಲೆ ಇದಕ್ಕೆ ಯುವತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಯನ್ನು ಮನೆಯಲ್ಲಿ ಕೂಡಿಹಾಕಿ 4 ದಿನಗಳ ಕಾಲ ರೇಪ್ ಮಾಡಲಾಗಿದೆ.
ಇದೀಗ ದುರುಳನಿಂದ ತಪ್ಪಿಸಿಕೊಂಡು ಬಂದ ಯುವತಿ ಚಂದ್ರಾಯಣಗುಟ್ಟ ಠಾಣೆಗೆ ದೂರು ದಾಖಲಿಸಿದ್ದು,ಇದೀಗ ಯುವತಿಯ ದೂರು ಆಧರಿಸಿ ಪೊಲೀಸರು ಅರಬ್ ನ ಶೇಖ್ ನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.